alex Certify
ಕನ್ನಡ ದುನಿಯಾ       Mobile App
       

Kannada Duniya

‘ಸಂಕಷ್ಟ’ಕ್ಕೆ ಸಿಲುಕಿದ ನೀರವ್ ಮೋದಿ ಸಹೋದರಿ

ದೇಶದಲ್ಲಿಯೇ ಸದ್ದು ಮಾಡಿದ್ದ ಪಿ.ಎನ್.ಬಿ‌. ಹಗರಣದ ಪ್ರಮುಖ ಆರೋಪಿ ನೀರವ್ ಮೋದಿ ಸಹೋದರಿ ಪೂರ್ವಿ ಮೋದಿ ವಿರುದ್ಧ ಜಾರಿ ನಿರ್ದೇಶನಾಲಯ ರೆಡ್ ಕಾರ್ನರ್ ನೊಟೀಸ್ ಜಾರಿಗೊಳಿಸಿದೆ.

ಸುಮಾರು ಎರಡು ಬಿಲಿಯನ್ ಡಾಲರ್ ಮೊತ್ತದ ಹಗರಣ ಮೊತ್ತದಲ್ಲಿ ಆರೋಪಿಯಾಗಿರುವ ನೀರವ್ ಮೋದಿ ಅವರೊಂದಿಗೆ ಪೂರ್ವಿ ಮೋದಿ ವಿರುದ್ಧವೂ ಇಡಿ ರೆಡ್ ಕಾರ್ನರ್ ನೊಟೀಸ್ ಜಾರಿಗೊಳಿಸಿದ್ದು, ಇಂಟರ್ಪೋಲ್ ಮೂಲಕ ಬಂಧನಕ್ಕೆ ಸಿದ್ಧತೆ ನಡೆಸಿದೆ.

ಮುಂಬೈ ಕೋರ್ಟ್ ಕಳೆದ ವರ್ಷ ಆಗಸ್ಟ್ ನಲ್ಲಿ ಪೂರ್ವಿ ಹಾಗೂ ಸಹೋದರ ನೀಶಲ್ ಅವರನ್ನು ವಿಚಾರಣೆಗೆ ಸೆ.25 ರೊಳಗೆ ಹಾಜರಾಗುವಂತೆ ಸೂಚನೆ ನೀಡಿತ್ತು. ಆದರೆ ಇಲ್ಲಿಯವರೆಗೆ ಹಾಜರಾಗದಿರುವುದರಿಂದ ರೆಡ್ ಕಾರ್ನರ್ ನೊಟೀಸ್ ಜಾರಿಗೊಳಿಸಲಾಗಿದೆ.

ಇಡಿ ಮೂಲಗಳ ಪ್ರಕಾರ, ನೀರವ್ ಮೋದಿ ಅವರ ವಂಚನೆ ಪ್ರಕರಣದಲ್ಲಿ ಪೂರ್ವಿ ಅವರ ಪಾಲಿದ್ದು, ಅವರನ್ನು ವಿಚಾರಣೆಗೆ ಒಳಪಡಿಸುವುದರಿಂದ ಮಾಹಿತಿ ಹೊರಬರಲಿದೆ ಎನ್ನುವುದಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು.

ಆದರೆ ವಿಚಾರಣೆಗೆ ಹಾಜರಾಗುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ, ಇಂಟರ್ ಪೋಲ್ ಸಹಾಯದಿಂದ 197 ದೇಶಗಳಲ್ಲಿ ಪೂರ್ವಿಯನ್ನು ಹುಡುಕಲು ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...