alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಂಗಾಪುರದಲ್ಲಿ ದೇವಸ್ಥಾನ, ಮಸೀದಿಗೆ ಭೇಟಿ ನೀಡಿದ ಪಿಎಂ

ಸಿಂಗಾಪುರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಭಾರತಕ್ಕೆ ವಾಪಸ್ ಆಗಲಿದ್ದಾರೆ. ಸಿಂಗಾಪುರ ಭೇಟಿಯ ಎರಡನೇ ಹಾಗೂ ಕೊನೆ ದಿನವಾದ ಇಂದು ಮೋದಿ ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಅವ್ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ನಂತ್ರ ಮೋದಿ ಮಾರಿಯಮ್ಮನ್ ದೇವಸ್ಥಾನಕ್ಕೆ ತೆರಳಿ ಪೂಜೆ ಅರ್ಚನೆ ಮಾಡಿದ ನರೇಂದ್ರ ಮೋದಿ ಪೂಜಾರಿಗಳ ಆಶೀರ್ವಾದ ಪಡೆದ್ರು. ದೇವರ ದರ್ಶನದ ನಂತ್ರ ಮೋದಿ ಚುಲಿಯಾ ಮಸೀದಿಗೆ ಭೇಟಿ ನೀಡಿದ್ದರು. ಮಸೀದಿ ಭೇಟಿಗೂ ಮುನ್ನ ಸಿಂಗಾಪುರದ ಮಾಜಿ ಪ್ರಧಾನಿ ಗೋ ಚೋಕ್ ಟಾಂಗ್ ಅವ್ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಸಾಂಸ್ಕೃತಿಕ ಸಂಬಂಧವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಮೋದಿ ಸಿಂಗಾಪುರದ ಹಳೆಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಮಾಡಿದ್ದಾರೆ. ನಂತ್ರ ಸಿಂಗಾಪುರ ಸಾಂಸ್ಕೃತಿಕ ಮಂತ್ರಿ ಜೊತೆ ಪಿಎಂ ಭಾರತದ ಚುಲಿಯಾ ವ್ಯಾಪಾರಿ ನಿರ್ಮಿಸಿದ ಮಸೀದಿಗೆ ತೆರಳಿದ್ದರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವಿಟ್ ಮಾಡಿದ್ದಾರೆ.

ಮೂರು ದೇಶಗಳ ಪ್ರವಾಸದಲ್ಲಿರುವ ಮೋದಿ ಇಂಡೋನೇಷ್ಯಾ, ಮಲೇಷ್ಯಾ ಪ್ರವಾಸದ ನಂತ್ರ ಗುರುವಾರ ಸಿಂಗಾಪುರಕ್ಕೆ ಬಂದಿದ್ದರು. ಶುಕ್ರವಾರ ಭಾರತ-ಸಿಂಗಾಪುರದ ಮಧ್ಯೆ ಅನೇಕ ಒಪ್ಪಂದಗಳ ಬಗ್ಗೆ ಮಾತುಕತೆ ನಡೆದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...