alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಧಾನಿ ಮೋದಿ ಸಭೆಯಲ್ಲಿ ತೂಕಡಿಸುತ್ತಿದ್ದರಂತೆ ಚೀನಾ ಅಧಿಕಾರಿಗಳು…!

ಪ್ರಧಾನಿ ನರೇಂದ್ರ ಮೋದಿ ಚೀನಾ ಪ್ರವಾಸಕ್ಕೆ ತೆರಳಿದ್ದಾಗ ಅಲ್ಲಿನ ಅಧಿಕಾರಿಗಳು ನಿದ್ದೆ ಮಾಡುತ್ತಿರುವುದನ್ನು ಸ್ವತಃ ಮೋದಿಯೇ ಗುರುತಿಸಿದ್ದಾರೆ. ಈ ವಿಷಯವನ್ನು ಚೀನಾದ ರಾಯಭಾರಿ ಲುಯೋ ಜುಹಾಯಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಹೌದು….ಮೋದಿಯವರು ಇತ್ತೀಚಿಗೆ ಚೀನಾ ಭೇಟಿಗೆ ತೆರಳಿದ್ದಾಗ ಅಲ್ಲಿನ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜೊತೆಗಿನ ವುಹಾನ್ ಭೇಟಿಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಹುಬೇಯ್ ಪ್ರಾಂತ್ಯದಲ್ಲಿ ನಡೆದ ಅನೌಪಚಾರಿಕ ಸಭೆಯಲ್ಲಿ ಚೀನಾದ ಅಧಿಕಾರಿಗಳು ತೂಕಡಿಸುತ್ತಿದ್ದದ್ದನ್ನು ಮೋದಿಯೇ ಗಮನಿಸಿದ್ದಾರಂತೆ.

ಈ ಸಭೆಯಲ್ಲಿ ಮಾತನಾಡಿದ್ದ ಮೋದಿ, ಇದು ತಮ್ಮ 2 ನೇ ಭೇಟಿ ಎಂದಾಗ ಚೀನಾದ ಅಧಿಕಾರಿಗಳೇ ಆಶ್ಚರ್ಯಪಟ್ಟಿದ್ದರು. ತಾವು ಗುಜರಾತ್ ಸಿಎಂ ಆಗಿದ್ದಾಗ ಡ್ಯಾಂ ಒಂದರ ಅಧ್ಯಯನಕ್ಕೆ ಬಂದಿದ್ದಾಗಿ ಮೋದಿ ತಿಳಿಸಿದ್ದಾರೆ. ವೇಗವಾಗಿ ಹಾಗೂ ಗುಣಮಟ್ಟದ ಡ್ಯಾಂ ನಿರ್ಮಾಣ ಆಗಿದ್ದರ ಬಗ್ಗೆ ತಾವು ತಿಳಿದುಕೊಂಡಿದ್ದಾಗಿ ಮೋದಿ ಹೇಳಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...