alex Certify
ಕನ್ನಡ ದುನಿಯಾ       Mobile App
       

Kannada Duniya

ಟಾಯ್ಲೆಟ್ ಕಾರಣಕ್ಕೆ ಮರಳಿ ಬಂತು ವಿಮಾನ…!

ವಿಮಾನದಲ್ಲಿ 60 ನುರಿತ ಪ್ಲಂಬರ್ ಗಳಿದ್ರೂ ನಾರ್ವೆಯ ಫ್ಲೈಟ್ ಒಂದು ಟಾಯ್ಲೆಟ್ ಸಮಸ್ಯೆಯಿಂದಾಗಿ ಮಾರ್ಗಮಧ್ಯೆಯೇ ಭೂಸ್ಪರ್ಷ ಮಾಡಿದೆ.

ದಿ ನಾರ್ವೆಯನ್ ಏರ್ ಫ್ಲೈಟ್, ಶನಿವಾರ ಬೆಳಗ್ಗೆ ಓಸ್ಲೋ ವಿಮಾನ ನಿಲ್ದಾಣದಿಂದ ಹೊರಟಿತ್ತು. ಈ ವಿಮಾನ ಜರ್ಮನಿಯ ಮುನಿಚ್ ಗೆ ತೆರಳಬೇಕಿತ್ತು. ಸ್ವೀಡನ್ ಗಡಿಯ ಬಳಿ ಬರುತ್ತಿದ್ದಂತೆ ವಿಮಾನದ ಟಾಯ್ಲೆಟ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಟಾಯ್ಲೆಟ್ ಬ್ರೇಕ್ ಆಗಿ ಪ್ರಯಾಣಿಕರಿಗೆ ಫಜೀತಿ ಶುರುವಾಗಿತ್ತು. 186 ಸೀಟುಗಳುಳ್ಳ ಆ ವಿಮಾನದಲ್ಲಿ 60 ಮಂದಿ ಪ್ಲಂಬರ್ ಗಳಿದ್ರು.

ನಾರ್ವೆಯ ಪ್ಲಂಬಿಂಗ್ ಕಂಪನಿಯೊಂದರ ಸಿಬ್ಬಂದಿಯೆಲ್ಲ ತಮ್ಮ ಹಿರಿಯ ಅಧಿಕಾರಿಗಳೊಂದಿಗೆ ಮುನಿಚ್ ಗೆ ಪ್ರವಾಸ ಹೊರಟಿದ್ರು. ಆದ್ರೆ ವಿಮಾನದ ಶೌಚಾಲಯದಲ್ಲಾದ ಸಮಸ್ಯೆಗೆ ಪರಿಹಾರ ಕಲ್ಪಿಸಲು ಅವರಿಂದ್ಲೂ ಸಾಧ್ಯವಾಗಲಿಲ್ಲ.

ಹಾಗಾಗಿ ಮತ್ತೆ ವಿಮಾನ ಓಸ್ಲೋ ಏರ್ ಪೋರ್ಟ್ ಗೆ ಮರಳಿದೆ. ನಿಲ್ದಾಣದಲ್ಲಿದ್ದ ಎಂಜಿನಿಯರ್ ಗಳು ಹಾಗೂ ಇತರ ಸಿಬ್ಬಂದಿ 2 ಗಂಟೆ ಶ್ರಮಿಸಿ ಟಾಯ್ಲೆಟ್ ಸರಿ ಮಾಡಿದ್ದಾರೆ. ಬಳಿಕ ಮತ್ತೆ ವಿಮಾನ ಜರ್ಮನಿಯ ಮುನಿಚ್ ನತ್ತ ಪ್ರಯಾಣ ಬೆಳೆಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...