alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದಲ್ಲಿ ಪ್ರಯಾಣಿಕರ ಎದುರಲ್ಲೇ ಮೂತ್ರ ವಿಸರ್ಜನೆ

air-india-787

ನೇಚರ್ ಕಾಲ್ ಗೆ ಅರ್ಜೆಂಟ್ ಆದಾಗ ಶೌಚಾಲಯಕ್ಕೆ ಹೋಗುತ್ತಾರೆ. ಅದೂ ಆಗಲಿಲ್ಲ ಎಂದರೆ, ಮರೆಯಾಗಿರುವ ಜಾಗವನ್ನು ಹುಡುಕುತ್ತಾರೆ. ಆದರೆ, ಇಲ್ಲೊಬ್ಬ ಭೂಪ ವಿಮಾನ ಹಾರಾಡುತ್ತಿದ್ದಾಗಲೇ, ಪ್ರಯಾಣಿಕರ ಎದುರಿನಲ್ಲೇ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ.

ಭಾರತದಿಂದ ಬರ್ಮಿಂಗ್ ಹ್ಯಾಂಗೆ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಕ 39 ವರ್ಷದ ಜಿನು ಅಬ್ರಹಾಂ ಎಂಬಾತನಿಗೆ ತುರ್ತಾಗಿ ಮೂತ್ರ ವಿಸರ್ಜನೆ ಮಾಡಬೇಕಾಗಿ ಬಂದಿದೆ. ಆದರೆ ಶೌಚಾಲಯಕ್ಕೆ ಹೋಗದೇ ಆತ ವಿಮಾನದ ಸೀಟಿನ ಮೇಲೆ ಪ್ಯಾಂಟ್ ಬಿಚ್ಚಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನದಲ್ಲಿ ತನ್ನ 10 ವರ್ಷದ ಮಗನೊಂದಿಗೆ ಜನವರಿ 19ರಂದು ಭಾರತದಿಂದ ಬರ್ಮಿಂಗ್ ಹ್ಯಾಂಗೆ ಪ್ರಯಾಣ ಬೆಳೆಸಿದ್ದ ಈತ ವಿಪರೀತ ಮದ್ಯ ಸೇವಿಸಿದ್ದನೆನ್ನಲಾಗಿದೆ.

ಮದ್ಯದ ಅಮಲಿನಲ್ಲಿ ಕೂಗಾಡುತ್ತಾ ಅಲ್ಲೇ ಮೂತ್ರ ವಿಸರ್ಜನೆ ಮಾಡಿದ್ದಾನೆ. ಆತನನ್ನು ಬರ್ಮಿಂಗ್ ಹ್ಯಾಂ ವಿಮಾನ ನಿಲ್ದಾಣದಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಬರ್ಮಿಂಗ್ ಹ್ಯಾಂನ ಕ್ರೌನ್ ನ್ಯಾಯಾಲಯ ಜಿನು ಅಬ್ರಹಾಂಗೆ 75,000 ರೂ (1000 ಯೂರೋ) ದಂಡ ವಿಧಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...