alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಸುಂಟರಗಾಳಿ ಮಧ್ಯೆ ವಿಮಾನ ಹಾರಾಟ

ಅಪಾಯಕಾರಿ ಸ್ಥಿತಿಯಲ್ಲೂ ಹಾರಾಟ ನಡೆಸಿದ ವಿಮಾನದ ವಿಡಿಯೋ ಒಂದು ವೈರಲ್ ಆಗಿದೆ. ರಷ್ಯಾದಲ್ಲಿ ಭೀಕರ ಸುಂಟರಗಾಳಿಯ ಮಧ್ಯೆಯೇ ವಿಮಾನವೊಂದು ಹಾರಾಟ ನಡೆಸಿದೆ. ಕಪ್ಪು ಸಮುದ್ರದ ತಟದಲ್ಲಿರೋ ಸೊಚಿ ಎಂಬಲ್ಲಿ ವಿಮಾನ ಪತ್ತೆಯಾಗಿದೆ.

ಮೂರು ಸುಂಟರಗಾಳಿಗಳು ವೇಗವಾಗಿ ಬೀಸುತ್ತಿದ್ವು. ಅವುಗಳ ನಡುವೆಯೇ ಹಾರಾಟ ನಡೆಸಿದ ವಿಮಾನ ಅತ್ತಿತ್ತ ಓಲಾಡಿದೆ. ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲು ಪೈಲಟ್ ಪ್ರಯತ್ನಿಸಿದ್ದಾನೆ. ಇನ್ ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಲಾಗಿದೆ.

ನಗರದ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರು ಈ ದೃಶ್ಯಕ್ಕೆ ಸಾಕ್ಷಿಯಾಗಿದ್ದು, ಅದನ್ನು ಸೆರೆಹಿಡಿದಿದ್ದಾರೆ. ಕಪ್ಪು ಸಮುದ್ರದ ಮೇಲ್ಭಾಗದಲ್ಲಿ ಸುಮಾರು 12 ಸುಂಟರಗಾಳಿಗಳೆದ್ದಿದ್ದವು ಅಂತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುಂಟರಗಾಳಿ ವಿಮಾನ ಹಾರಾಟಕ್ಕೆ ತೀವ್ರ ಅಡಚಣೆ ಉಂಟುಮಾಡುತ್ತದೆ. ಸುಂಟರಗಾಳಿಯ ಮಧ್ಯೆ ವಿಮಾನ ಹಾರಾಟ ನಡೆಸುವುದರಿಂದ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಗಳಿರುತ್ತವೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...