alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಜ್ಜಾ ವಿತರಿಸಲು ಕುದುರೆ ಏರಿ ಬಂದ ಭೂಪ…!

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಳಿತವಾಗುತ್ತಿರುವ ಕಾರಣ, ಭಾರತದಲ್ಲೂ ಪೆಟ್ರೋಲ್-ಡೀಸೆಲ್ ಬೆಲೆ ಅದಕ್ಕನುಗುಣವಾಗಿ ಏರಿಕೆ-ಇಳಿಕೆ ಕಾಣುತ್ತಿದೆ. ಬ್ರೆಜಿಲ್ ನಲ್ಲಿಯೂ ಪೆಟ್ರೋಲ್ ಬೆಲೆ ಬಾರಿ ಏರಿಕೆಯಾಗಿದ್ದು, ಜನ ಪ್ರತಿಭಟನೆ ನಡೆಸುತ್ತಿದ್ದಾರೆ.

ಪೆಟ್ರೋಲ್ ಬೆಲೆ ಏರಿಕೆಯ ತಲೆಬಿಸಿ ನಡುವೆ ಅಲ್ಲಿನ ತೈಲ ಕಂಪನಿಯ ಸಿಇಒ ಪೆಡ್ರೊ ಎಂಬಾತನ ರಾಜಿನಾಮೆಗೆ ಆಗ್ರಹಿಸಿ ಮುಷ್ಕರ ನಡೆಸಲಾಗುತ್ತಿದ್ದು, ಇದರಿಂದಾಗಿ ಪೆಟ್ರೋಲ್-ಡೀಸೆಲ್ ಲಭ್ಯವಾಗುವುದೂ ದುಸ್ತರವಾಗಿದೆ.

ಇದಕ್ಕೆ ಪ್ರತಿಭಟನೆಯೆಂಬಂತೆ ಪಿಜ್ಜಾ ವಿತರಕನೊಬ್ಬ ಕುದುರೆ ಮೇಲೆ ಆಗಮಿಸಿ ಗ್ರಾಹಕರಿಗೆ ಪಿಜ್ಜಾ ವಿತರಿಸಿದ್ದಾನೆ. ಇದರ ಫೋಟೋ ಕ್ಲಿಕ್ಕಿಸಿದ ನೆರೆಮನೆಯವರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ವಿವಿಧ ಕಮೆಂಟುಗಳಿಗೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...