alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಲ್ಲಿ ಸಾಯಲು ಹೊರಟಿದ್ದರಾ ಬ್ಲೇಡ್ ರನ್ನರ್ ಪಿಸ್ಟೋರಿಯಸ್..?

oscar pistorius

ಪ್ಯಾರಾ ಒಲಂಪಿಕ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ದಕ್ಷಿಣ ಆಫ್ರಿಕದ ಕ್ರೀಡಾಪಟು ಆಸ್ಕರ್ ಪಿಸ್ಟೋರಿಯಸ್, ಗೆಳತಿಯ ಹತ್ಯೆ ಮಾಡಿದ ಹಿನ್ನಲೆಯಲ್ಲಿ 6 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಜೈಲುವಾಸ ಅನುಭವಿಸುತ್ತಿರುವ ಅವರು ಸ್ಥಳದಲ್ಲೇ ಅಂಗೈ ನರ ಕತ್ತರಿಸಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆಂದು ಪತ್ರಿಕೆಯೊಂದು ವರದಿ ಮಾಡಿದೆ.

ಆಗಸ್ಟ್ 6 ರ ಶನಿವಾರ ಮಧ್ಯಾಹ್ನ ತೀವ್ರ ಅಂಗೈ ನೋವಿನಿಂದ ಕೂಗಿಕೊಳ್ಳುತ್ತಿದ್ದ ಪಿಸ್ಟೋರಿಯಸ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಚಿಕಿತ್ಸೆಯ ನಂತರ ವೈದ್ಯರು, ಪಿಸ್ಟೋರಿಯಸ್ ಅವರ ಅಂಗೈ ನರಗಳಿಗೆ ಹೆಚ್ಚೇನು ಗಾಯಗಳಾಗಿಲ್ಲ ಎಂದು ಹೇಳಿದ್ದಾರೆ. ಚಿಕಿತ್ಸೆ ಮುಗಿದ ಬಳಿಕ ಅವರನ್ನು ಮರಳಿ ಜೈಲಿಗೆ ಕರೆತರಲಾಗಿದೆ.

ಜೈಲಿನಲ್ಲಿ ನಡೆಸಿದ ತಪಾಸಣೆ ವೇಳೆ ಪಿಸ್ಟೋರಿಯಸ್ ಅವರು ಇದ್ದ ಕೋಣೆಯಲ್ಲಿ ಬ್ಲೇಡ್ ಕಂಡುಬಂದಿದೆ. ಹಾಗಾಗಿ ಇವರು ಆತ್ಮಹತ್ಯೆಗೆ ಯತ್ನಿಸಿರಬಹುದೆಂದು ಊಹಿಸಲಾಗಿದೆ. ಆದರೆ ಜೈಲು ಸಿಬ್ಬಂದಿಗಳು ಈ ಮಾತನ್ನು ಅಲ್ಲಗೆಳೆದಿದ್ದಾರೆ ಮತ್ತು ನಮಗೆ ಈ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ ಎಂಬ ಹಾರಿಕೆಯ ಉತ್ತರ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...