alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದಲ್ಲೇ ಪ್ರೇಯಸಿಗೆ ಪ್ರಪೋಸ್ ಮಾಡಿದ ಪೈಲೆಟ್

ಇತ್ತೀಚಿನ ದಿನಗಳಲ್ಲಿ ಸಂಗಾತಿಯನ್ನು ಖುಷಿಗೊಳಿಸಲು ಜನರು ಚಿತ್ರವಿಚಿತ್ರ ಕೆಲಸಗಳನ್ನು ಮಾಡ್ತಾರೆ. ವಿಭಿನ್ನ ರೀತಿಯಲ್ಲಿ ಪ್ರೇಮ ನಿವೇದನೆ ಮಾಡ್ತಾರೆ. ಜೋರ್ಡಾನ್ ನಲ್ಲಿ ಪೈಲೆಟ್ ಒಬ್ಬ ಸಂಗಾತಿಗೆ ವಿಮಾನದಲ್ಲಿಯೇ ಪ್ರೇಮ ನಿವೇದನೆ ಮಾಡಿ ಸುದ್ದಿಯಾಗಿದ್ದಾನೆ. ಆತನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಯಲ್ ಜೋರ್ಡಾನಿಯಾ ವಿಮಾನ ಅಮನ್ ನಿಂದ ದುಬೈಗೆ ಹೋಗ್ತಾಯಿತ್ತು. ಪೈಲೆಟ್ ಅಬು ಮನೇಹ್ ಗರ್ಲ್ ಫ್ರೆಂಡ್ ಕೂಡ ದುಬೈಗೆ ಹೋಗ್ತಿದ್ದಳು. ಈ ಸಮಯವನ್ನು ಸದುಪಯೋಗಪಡಿಸಿಕೊಂಡ ಅಬು ಕೈನಲ್ಲಿ ಉಂಗುರ ಹಿಡಿದು ಪ್ರೇಯಸಿ ಮುಂದೆ ಮಂಡಿಯೂರಿ ಕುಳಿತು ಪ್ರೇಮ ನಿವೇದನೆ ಮಾಡಿದ್ದಾನೆ.

ಪ್ರಯಾಣಿಕರ ಎದುರಲ್ಲಿ ವಿಶೇಷ ರೀತಿಯಲ್ಲಿ ಅಬು ಪ್ರಪೋಸ್ ಮಾಡಿದ್ದನ್ನು ಸಂಗಾತಿ ಒಪ್ಪಿಕೊಂಡಿದ್ದಾಳೆ. ಅಬು ತಬ್ಬಿಕೊಂಡು ಖುಷಿಪಟ್ಟಿದ್ದಾಳೆ. ಈ ಸುಂದರ ಕ್ಷಣವನ್ನು ವಿಮಾನ ಸಿಬ್ಬಂದಿ ಹಬ್ಬವಾಗಿ ಆಚರಿಸಿದ್ದಾರೆ. ಫೋಟೋ ಕ್ಲಿಕ್ಕಿಸಿ ಖುಷಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...