alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆ ಮೇಲೆ ಹೆಲಿಕಾಪ್ಟರ್ ಲ್ಯಾಂಡ್ ಆಗಿದ್ದೇಕೆ ಗೊತ್ತಾ..?

pilot-lands-helicopter-in-kazakhstan-to-ask-directionsವಾಹನಗಳಲ್ಲಿ ಪ್ರಯಾಣಿಸುವಾಗ ಮಾರ್ಗ ತಿಳಿಯದಿದ್ದ ಸಂದರ್ಭದಲ್ಲಿ ದಾರಿಯಲ್ಲಿ ಸಾಗುವವರ ಬಳಿ ಕೇಳುವುದು ಸಾಮಾನ್ಯ ಸಂಗತಿ. ಆದರೆ ಇಲ್ಲೊಬ್ಬ ಪೈಲಟ್ ಮಾರ್ಗ ತಿಳಿಯದೆ ರಸ್ತೆ ಮಧ್ಯದಲ್ಲೇ ಹೆಲಿಕಾಪ್ಟರ್ ಇಳಿಸಿ ಟ್ರಕ್ ಡ್ರೈವರ್ ಓರ್ವನ ಬಳಿ ವಿಚಾರಿಸಿದ್ದು, ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಘಟನೆ ಕಝಕ್ ಸ್ತಾನ್ ದಲ್ಲಿ ನಡೆದಿದ್ದು, ಟ್ರಕ್ ಒಂದು ರಸ್ತೆಯಲ್ಲಿ ಸಾಗುತ್ತಿತ್ತು. ಸಂಪೂರ್ಣ ಪ್ರದೇಶ ಹಿಮದಿಂದ ಅವೃತವಾಗಿದ್ದು, ಈ ಸಂದರ್ಭದಲ್ಲಿ ಹೆಲಿಕಾಪ್ಟರ್ ಒಂದು ತೀರಾ ಕೆಳಮಟ್ಟದಲ್ಲಿ ಹಾರಾಟ ನಡೆಸಿಕೊಂಡು ಬಂದಿದೆ.

ಬಳಿಕ ಟ್ರಕ್ ನಿಂದ ಸ್ವಲ್ಪ ಮುಂದೆ ಹೆಲಿಕಾಪ್ಟರ್ ಲ್ಯಾಂಡ್ ಮಾಡಿದ ಪೈಲಟ್, ಟ್ರಕ್ ಡ್ರೈವರ್ ಬಳಿ ಓಡೋಡಿ ಬಂದಿದ್ದಾನೆ. ಆತನ ಬಳಿ ತಾನು ಸಾಗಬೇಕಾದ ಮಾರ್ಗದ ಮಾಹಿತಿ ಪಡೆದ ಪೈಲಟ್ ಪುನಃ ಹೆಲಿಕಾಪ್ಟರ್ ಹಾರಿಸಿಕೊಂಡು ಹೋಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...