alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದ ಹುಟ್ಟು ಹಾಕಿದೆ ಅಪ್ರಾಪ್ತರ ವಿವಾಹ ನಿಶ್ಚಿತಾರ್ಥದ ಫೋಟೋ

egyptian-children12 ವರ್ಷದ ಹುಡುಗ ಹಾಗೂ 11 ವರ್ಷದ ಹುಡುಗಿಯ ವಿವಾಹ ನಿಶ್ಚಿತಾರ್ಥದ ಫೋಟೋವೊಂದು ಈಗ ವಿವಾದಕ್ಕೆ ಕಾರಣವಾಗಿದೆ. ಪ್ರಾಪ್ತ ವಯಸ್ಕರಲ್ಲದಿದ್ದರೂ ನಿಶ್ಚಿತಾರ್ಥ ಮಾಡುವ ಮೂಲಕ ಕಾನೂನು ಉಲ್ಲಂಘಿಸಲಾಗಿದೆ ಎಂದು ಟೀಕೆಗಳು ಕೇಳಿ ಬರುತ್ತಿದ್ದರೆ ನಿಶ್ಚಿತಾರ್ಥ ನೆರವೇರಿಸಿದವರು ಮಾತ್ರ ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಈ ಘಟನೆ ಈಜಿಪ್ಟ್ ನ ಕೈರೋದಲ್ಲಿ ನಡೆದಿದ್ದು, ನಾಸರ್ ಹಸನ್ ಎಂಬಾತ ಇತ್ತೀಚೆಗೆ ತನ್ನ ಹಿರಿಯ ಪುತ್ರನ ವಿವಾಹವನ್ನು ಅದ್ದೂರಿಯಾಗಿ ನೆರವೇರಿಸಿದ್ದ. ಈ ಸಂಭ್ರಮವನ್ನು ಇಮ್ಮಡಿಗೊಳಿಸಲೆಂಬಂತೆ ಆತ, ಇದೇ ಸಂದರ್ಭದಲ್ಲಿ ತನ್ನ 12 ವರ್ಷದ ಪುತ್ರ ಓಮರ್ ನ ವಿವಾಹ ನಿಶ್ಚಿತಾರ್ಥವನ್ನು ಸಂಬಂಧಿ ಬಾಲಕಿ 11 ವರ್ಷದ ಘರಾಮ್ ಜೊತೆ ನೆರವೇರಿಸಿದ್ದಾನೆ.

ಈ ವಿವಾಹ ನಿಶ್ಚಿತಾರ್ಥದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ವಿವಾದ ಹುಟ್ಟಿಕೊಂಡಿದೆ. ಈಜಿಪ್ಟ್ ಕಾನೂನಿನ ಪ್ರಕಾರ ವಿವಾಹವಾಗುವವರಿಗೆ 18 ವರ್ಷಗಳಾಗಿರಬೇಕೆಂದು ನಿಗದಿಪಡಿಸಲಾಗಿದೆ. ಹಾಗಾಗಿ ನಿಶ್ಚಿತಾರ್ಥ ನೆರವೇರಿಸಿದ ನಾಸರ್ ಹಸನ್ ವಿರುದ್ದ ಕ್ರಮ ಕೈಗೊಳ್ಳಬೇಕೆಂಬ ಕೂಗು ಕೇಳಿ ಬರುತ್ತಿದೆ. ಆದರೆ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿರುವ ಆತ, ತಾನು ವಿವಾಹ ನೆರವೇರಿಸಿಲ್ಲ. ಬದಲಾಗಿ ನಿಶ್ಚಿತಾರ್ಥ ಮಾಡಿದ್ದೇನೆ. ಮುಂದೆ ಅವರಿಬ್ಬರು ಪ್ರಾಪ್ತ ವಯಸ್ಕರಾದ ಬಳಿಕ ವಿವಾಹ ಮಾಡುವುದಾಗಿ ಹೇಳಿಕೊಂಡಿದ್ದಾನೆ. ಓಮರ್ ಮತ್ತು ಘರಾಮ್ ಪರಸ್ಪರ ಹಚ್ಚಿಕೊಂಡಿದ್ದು, ಮುಂದೆ ಅವರಿಬ್ಬರು ದಂಪತಿಗಳಾಗಬೇಕೆಂಬ ಕಾರಣಕ್ಕೆ ಹೀಗೆ ಮಾಡಿರುವುದಾಗಿ ಹೇಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...