alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಅತಿ ಶ್ರೀಮಂತ ಮಹಿಳೆ ಯಾರು ಗೊತ್ತಾ..?

ಪ್ಯಾರಿಸ್ ನ ಫ್ರಾಂಕೋಯಿಸ್ ಬೆಟ್ಟನ್ಕೋರ್ಟ್ ಈಗ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ.

ಇದುವರೆಗೆ ಲೋರಿಯಲ್ ಸೌಂದರ್ಯವರ್ಧಕ ಕಂಪನಿಯ ಒಡತಿಯಾಗಿದ್ದ ಲಿಲಿಯನ್ ಬೆಟ್ಟನ್ಕೋರ್ಟ್ ಅತಿ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ರು. 94 ವರ್ಷದ ಲಿಲಿಯನ್ ಮೂರು ದಿನಗಳ ಹಿಂದಷ್ಟೆ ಮೃತಪಟ್ಟಿದ್ದಾರೆ.

ಅವರ ಸಾವಿನ ನಂತರ ಉತ್ತರಾಧಿಕಾರಿಯಾಗಿರೋ ಪುತ್ರಿ ಫ್ರಾಂಕೋಯಿಸ್ ಎಲ್ಲಾ ಆಸ್ತಿಗೆ ಒಡತಿಯಾಗಿದ್ದಾಳೆ. 2016ರಲ್ಲಿ ಫೋರ್ಬ್ಸ್ ಮ್ಯಾಗಝೀನ್ ಪ್ರಕಟಿಸಿದ ವಿಶ್ವದ ಅತಿ ಶ್ರೀಮಂತ ಮಹಿಳೆಯರಲ್ಲಿ ಲಿಲಿಯನ್ ಮೊದಲಿಗರಾಗಿದ್ದರು.

ಬಹುಮುಖ ಪ್ರತಿಭೆ ಲಿಲಿಯನ್ ಲೇಖಕಿಯಾಗಿದ್ದರು, ಪಿಯಾನೋ ಬಾರಿಸುತ್ತಿದ್ದರು. ಆಕೆ ಎರಡು ಪುಸ್ತಕಗಳನ್ನು ಕೂಡ ಬರೆದಿದ್ದರು. ಕಾಸ್ಮೆಟಿಕ್ಸ್ ಮಾರುಕಟ್ಟೆಯಲ್ಲಿ ಶೇ.33ರಷ್ಟು ಪಾಲನ್ನು ಲೋರಿಯಲ್ ಹೊಂದಿದೆ. ಲಿಲಿಯನ್ ಅವರ 43.3 ಬಿಲಿಯನ್ ಆಸ್ತಿ ಈಗ ಪುತ್ರಿ ಫ್ರಾಂಕೋಯಿಸ್ ಪಾಲಾಗಿದೆ. ಹೀಗಾಗಿ ಆಕೆ ವಿಶ್ವದ ಸಿರಿವಂತ ಮಹಿಳೆ ಎಂಬ ಕೀರ್ತಿಗೆ ಪಾತ್ರವಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...