alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಯಾಣಿಕರನ್ನು ನಡುಮಧ್ಯೆ ಕೈ ಬಿಟ್ಟಿದೆ ಪಾಕ್ ಏರ್ಲೈನ್ಸ್

ಯುಎಇ ಯ ಅಬುಧಾಬಿಯಿಂದ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಹೀಂ ಯಾರ್ ಖಾನ್ ಗೆ ತೆರಳುತ್ತಿದ್ದ ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್ ವಿಮಾನ ತಾಂತ್ರಿಕ ದೋಷದ ಕಾರಣಕ್ಕೆ ಲಾಹೋರ್ ನಲ್ಲಿ ಲ್ಯಾಂಡ್ ಆಗಿದ್ದು, ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಬದಲಾಗಿ ಅವರಿಗೆ ಬಸ್ ಮೂಲಕ ತೆರಳುವಂತೆ ಹೇಳಿದ ಘಟನೆ ನಡೆದಿದೆ.

ಮಂಜು ಮುಸುಕಿದ ವಾತಾವರಣವಿದ್ದ ಕಾರಣ ಅಬುಧಾಬಿಯಿಂದ ರಹೀಂ ಯಾರ್ ಖಾನ್ ಗೆ ತೆರಳುತ್ತಿದ್ದ ವಿಮಾನ ಲಾಹೋರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು. ವಾತಾವರಣ ತಿಳಿಯಾಗುವವರೆಗೂ ಪ್ರಯಾಣಿಕರಿಗೆ ಹೋಟೆಲ್ ಸೌಲಭ್ಯ ಕಲ್ಪಿಸಬೇಕಾದ ವಿಮಾನ ಯಾನ ಸಿಬ್ಬಂದಿ, ಲಾಹೋರ್ ನಿಂದ ರಹೀಂ ಯಾರ್ ಖಾನ್ ಗೆ ಬಸ್ ಮೂಲಕ ತೆರಳುವಂತೆ ಸೂಚಿಸಿದ್ದಾರೆ.

ಇದಕ್ಕೆ ಪ್ರಯಾಣಿಕರು ಪ್ರತಿಭಟಿಸಿದ್ದು, ಬದಲಿ ವ್ಯವಸ್ಥೆ ಕಲ್ಪಿಸುವವರೆಗೂ ವಿಮಾನದಿಂದ ಇಳಿಯಲು ನಿರಾಕರಿಸಿದ್ದಾರೆ. ಆಗ ಅಮಾನವೀಯತೆ ಮೆರೆದ ಪಾಕ್ ಇಂಟರ್ ನ್ಯಾಷನಲ್ ಏರ್ಲೈನ್ಸ್ ಸಿಬ್ಬಂದಿ, ವಿಮಾನದ ಎ.ಸಿ. ಆಫ್ ಮಾಡಿದ್ದಾರೆ. ಇದರಿಂದಾಗಿ ವಿಮಾನದಲ್ಲಿದ್ದ ಪ್ರಯಾಣಿಕರು ಉಸಿರಾಟದ ಸಮಸ್ಯೆಯನ್ನೆದುರಿಸಿದ್ದಾರೆ.

ಲಾಹೋರ್ ನಿಂದ ರಹೀಂ ಯಾರ್ ಖಾನ್ 624.5 ಕಿ.ಮೀ. ದೂರವಿದ್ದು, ಕಡೆ ಪಕ್ಷ ಸಮೀಪದ ವಿಮಾನ ನಿಲ್ದಾಣ ಮುಲ್ತಾನ್ ಗೆ ತಲುಪಿಸುವಂತೆ ಗೋಗರೆದರೂ ವಿಮಾನದ ಸಿಬ್ಬಂದಿ ಸ್ಪಂದಿಸಿಲ್ಲವೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...