alex Certify
ಕನ್ನಡ ದುನಿಯಾ       Mobile App
       

Kannada Duniya

ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಬಗ್ಗೆ ನಿಮಗೆ ತಿಳಿದಿರದ ಸಂಗತಿ

ಚಿಕ್ಕ ವಯಸ್ಸಿನಲ್ಲಿಯೇ ಖಾಯಿಲೆಗೆ ಸೆಡ್ಡು ಹೊಡೆದು ಮಹಾನ್ ವಿಜ್ಞಾನಿಯಾಗಿದ್ದ ಸ್ಟೀಫನ್ ಹಾಕಿಂಗ್ ಇನ್ನಿಲ್ಲ. ಅವ್ರ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ. 21ನೇ ವಯಸ್ಸಿನಲ್ಲಿಯೇ ವೈದ್ಯರು ಇನ್ನೆರಡು ವರ್ಷ ಮಾತ್ರ ಇರ್ತಿರಾ ಎಂದು ಸ್ಟೀಫನ್ ಹಾಕಿಂಗ್ ಗೆ ಹೇಳಿದ್ದರು. ಬ್ರಹ್ಮಾಂಡದ ರಹಸ್ಯಗಳನ್ನು ಜನರ ಮುಂದೆ ತೆರೆದಿಟ್ಟ ಸ್ಟೀಫನ್ ಹಾಕಿಂಗ್ ಜೀವನ ಕೂಡ ಅಷ್ಟೇ ಆಘಾತಕಾರಿಯಾಗಿತ್ತು.

ಸ್ಟೀಫನ್ ಹಾಕಿಂಗ್ ರಿಗೆ 21ನೇ ವಯಸ್ಸಿನಲ್ಲಿಯೇ amyotrophic lateral sclerosis (ALS) ಹೆಸರಿನ ಗಂಭೀರ ರೋಗ ಕಾಡಿತ್ತು. ಈ ರೋಗದಿಂದಾಗಿ ಅವ್ರ ಒಂದೊಂದೇ ಅಂಗ ನಿಧಾನವಾಗಿ ಕೆಲಸ ನಿಲ್ಲಿಸಿತ್ತು. ಆಕ್ಸ್ಫರ್ಡ್ ನಲ್ಲಿ ಅಂತಿಮ ವರ್ಷದಲ್ಲಿ ಓದುತ್ತಿರುವಾಗಲೇ ಸ್ಟೀಫನ್ ಹಾಕಿಂಗ್ ರಿಗೆ ಮೆಟ್ಟಿಲನ್ನು ಹತ್ತುವುದು ಕಷ್ಟವಾಗಿತ್ತು. ನಿಧಾನವಾಗಿ ಅವರಿಗೆ ಮಾತನಾಡುವುದು ಕಷ್ಟವಾಯ್ತು. ತಡವರಿಸಲು ಶುರು ಮಾಡಿದ್ರು.

ಈ ವೇಳೆ ವೈದ್ಯರು ನೀವು ಬದುಕೋದು ಇನ್ನೆರೆಡೇ ವರ್ಷ ಎಂದಿದ್ದರು. ಆದ್ರೆ ಖಾಯಿಲೆಗೆ ಸೆಡ್ಡು ಹೊಡೆದ ಸ್ಟೀಫನ್ ಹಾಕಿಂಗ್ ಸಂಶೋಧನೆಯನ್ನು ಮುಂದುವರೆಸಿದ್ದರು. ಹಾಕಿಂಗ್ ರಿಗೆ ಓಡಾಡಲು ಸಾಧ್ಯವಾಗ್ತಿರಲಿಲ್ಲ. ಅವರು ವೀಲ್ ಚೇರ್ ನಲ್ಲಿಯೇ ಕುಳಿತಿರುತ್ತಿದ್ದರು. ಕಂಪ್ಯೂಟರ್ ಹಾಗೂ ಇತರ ಸಾಧನದ ಮೂಲಕ ತಮ್ಮ ಭಾವನೆಗಳನ್ನು ಹೇಳುತ್ತಿದ್ದರು.

ಸ್ವರ್ಗವನ್ನು ಸಂಪೂರ್ಣ ಸುಳ್ಳು ಎಂದಿದ್ದ ಸ್ಟೀಫನ್ ಹಾಕಿಂಗ್ ಇದು ಕತ್ತಲೆಯನ್ನು ಹೆದರಿಸಲು ಇರುವ ಕಥೆ ಎಂದಿದ್ದರು. ನಮ್ಮ ದೇಹ ಕಂಪ್ಯೂಟರ್ ಇದ್ದಂತೆ. ಅದ್ರ ಭಾಗಗಳು ಕೆಲಸ ನಿಲ್ಲಿಸಿದ್ರೆ ಕಂಪ್ಯೂಟರ್ ಹಾಳಾಗುತ್ತದೆ. ಅದಕ್ಕೆ ಯಾವುದೇ ಸ್ವರ್ಗ, ನರಕವಿರುವುದಿಲ್ಲ. ಹಾಗೆ ನಮ್ಮ ದೇಹ ಎಂದಿದ್ದಿರು.

ಮರ್ಲಿನ್ ಮೆನ್ರೋ ದೊಡ್ಡ ಅಭಿಮಾನಿಯಾಗಿದ್ದ ಹಾಕಿಂಗ್ ಸಮಯದ ಯಂತ್ರ ತಯಾರಿಸಲು ಬಯಸಿದ್ದರು. ಒಂದು ವೇಳೆ ನನ್ನ ಬಳಿ ಟೈಂ ಮಷಿನ್ ಇದ್ದಿದ್ದರೆ ಹಾಲಿವುಡ್ ನ ಸುಂದರ ಬೆಡಗಿ ಮರ್ಲಿನ್ ಮನ್ರೋ ಭೇಟಿಯಾಗುತ್ತೇನೆ ಎಂದಿದ್ದರು. ಹಾಕಿಂಗ್ ಎರಡು ಮದುವೆಯಾಗಿದ್ದರು. 1974ರಲ್ಲಿ ವಿದ್ಯಾರ್ಥಿನಿ ಜೇನ್ಸ್ ವೈಲ್ಡ್ ಮದುವೆಯಾಗಿದ್ದರು. ಮೂರು ಮಕ್ಕಳಾದ ಮೇಲೆ 1999ರಲ್ಲಿ ವಿಚ್ಛೇದನವಾಗಿತ್ತು. ನಂತ್ರ ಮತ್ತೊಂದು ಮದುವೆಯಾಗಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...