alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ತನಪಾನದ ಬಗ್ಗೆ ಅರಿವು ಮೂಡಿಸಲು ಹೊಸ ಪ್ರಯತ್ನ

ಸ್ತನಪಾನ ಅನ್ನೋದು ತಾಯಿಯ ಪಾಲಿಗೆ ವಿಶಿಷ್ಟ ಅನುಭವ. ಅಮ್ಮನ ಅಮೃತವನ್ನು ಕುಡಿದು ಮಗು ಬೆಳೆಯುವ ಪ್ರಕ್ರಿಯೆಯೇ ವಿಶಿಷ್ಟ. ಸ್ತನ್ಯಪಾನ ತಾಯ್ತನದ ಸಂಕೇತ.

 

ಮಗುವಿಗೆ ಅಮ್ಮ ಹಾಲೂಡಿಸುವುದು ಒಂದು ಸಹಜ ಪ್ರಕ್ರಿಯೆ. ಮೊದಲೆಲ್ಲಾ ಕತ್ತಲ ಕೋಣೆಯಲ್ಲಿ ಕುಳಿತು ತಾಯಿ ಮಗುವಿಗೆ ಹಾಲುಣಿಸುತ್ತಿದ್ಲು. ಆದ್ರೆ ಈಗ ಕಾಲ ಬದಲಾಗಿದೆ.

 

ಸದ್ಯ ಸಾರ್ವಜನಿಕ ಸ್ಥಳಗಳಲ್ಲಿ ಮಗುವಿಗೆ ಹಾಲುಣಿಸುವುದು ಲೇಟೆಸ್ಟ್ ಟ್ರೆಂಡ್. ವಿದೇಶಗಳಲ್ಲಂತೂ ಪಬ್ಲಿಕ್ ಬ್ರೆಸ್ಟ್ ಫೀಡಿಂಗ್ ಸರ್ವೇಸಾಮಾನ್ಯವಾಗಿಬಿಟ್ಟಿದೆ.

 

ಇಂತಹ ತಾಯಂದಿರು ಮತ್ತು ಮಕ್ಕಳನ್ನು ಛಾಯಾಗ್ರಾಹಕಿಯೊರೊಬ್ಬರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ತಾಯಿಯಿ ಎದೆಹಾಲಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಅವರ ಉದ್ದೇಶ.

ಲಿಥುವೇನಿಯಾ ಮೂಲದ ಫೋಟೋಗ್ರಾಫರ್ ಐವೆಟ್ ಐವೆನ್ಸ್ ಅದ್ಭುತವಾಗಿ ಅಮ್ಮ-ಮಗುವಿನ ವಿಶಿಷ್ಟ ಅನುಭೂತಿಯನ್ನು ತಮ್ಮ ಕ್ಯಾಮರಾದಲ್ಲಿ ಕ್ಲಿಕ್ಕಿಸಿದ್ದಾರೆ.

 

ಎದೆಹಾಲು ತಾಯಿ ತನ್ನ ಮಗುವಿಗೆ ಕೊಡುವ ಅತಿ ದೊಡ್ಡ ಉಡುಗೊರೆ. ಅಷ್ಟೇ ಅಲ್ಲ ಮಗುವಿಗೆ ಅತ್ಯಂತ ಸೂಕ್ತವಾದ ಏಕೈಕ ಆಹಾರ ಅನ್ನೋದು ಛಾಯಾಗ್ರಾಹಕಿ ಐವೆಟ್ ಅಭಿಪ್ರಾಯ.

 

ಮಗುವಿಗೆ ಎದೆಹಾಲು ಉಣಿಸುವುದು ಕೂಡ ಒಂದು ಸುಂದರವಾದ ಪ್ರಕ್ರಿಯೆ. ಅದರ ಬಗ್ಗೆ ಇರುವ ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸಬೇಕು.

 

ಬೇರೆ ಬೇರೆ ವೃತ್ತಿಯಲ್ಲಿರುವ ಮಹಿಳೆಯರು ಕೂಡ ತಮ್ಮ ಮಕ್ಕಳಿಗೆ ಸ್ತನಪಾನ ಮಾಡಿಸುತ್ತಿರುವ ಫೋಟೋಗಳನ್ನು ಐವೆಟ್ ಸೆರೆ ಹಿಡಿದಿದ್ದಾಳೆ.

ಎಲ್ಲಕ್ಕಿಂತ ಮುಖ್ಯವಾಗಿ ಮಿಚಿಗನ್ ನ ಮಹಿಳೆಯೊಬ್ಬಳ ಫೋಟೋ ಗಮನ ಸೆಳೆದಿದೆ. ಮಿನಿ ಸ್ಟೀವೆನ್ಸನ್ ಎಂಬ ಈ ಮಹಿಳೆ ಬೆಂಕಿ ದುರಂತವೊಂದರಲ್ಲಿ ಪಾರಾಗಿ ಬಂದಿದ್ದಾಳೆ. ನೋವಿನಲ್ಲೂ ತನ್ನ ಮಗನಿಗೆ ಎದೆಹಾಲು ಉಣಿಸುವ ಮೂಲಕ ಸಾರ್ಥಕತೆ ಕಂಡುಕೊಂಡಿದ್ದಾಳೆ.

 

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...