alex Certify
ಕನ್ನಡ ದುನಿಯಾ       Mobile App
       

Kannada Duniya

ಒಳ ಉಡುಪು ಧರಿಸದೆ ಶಾಪಿಂಗ್ ಗೆ ಬಂದ್ಲು ಹುಡುಗಿ…!

china-4_CuwWSsS

ಚೀನಾದಲ್ಲಿ ಇತ್ತೀಚೆಗೆ ಹಾಸ್ಯಾಸ್ಪದ ಘಟನೆಗಳು ಜಾಸ್ತಿಯಾಗಿವೆ. ವಿಶೇಷ ಅಂದ್ರೆ ಅದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತದೆ. ಇದರಿಂದಾಗಿ ವಿಶ್ವಕ್ಕೆಲ್ಲ ಈ ಘಟನೆ ವೈರಲ್ ಆಗುತ್ತೆ.. ಚೀನಾ ಜನರ ಅಸಡ್ಡೆಯಿಂದ ಇಂತ ಘಟನೆಗಳು ನಡೆಯುತ್ತಿದೆಯೋ ಅಥವಾ ಪ್ರಚಾರಕ್ಕಾಗಿ ಹೀಗೆ ಮಾಡ್ತಿದ್ದಾರಾ ಎಂಬುದು ಗೊತ್ತಾಗ್ತಾ ಇಲ್ಲ.

ಅದೇನೇ ಇರಲಿ ಮತ್ತೆ ಚೀನಾದ ಒಂದು ಹಾಸ್ಯಾಸ್ಪದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೀಜಿಂಗ್ ನಲ್ಲಿರುವ ಐಕೆಇಎ ಪೀಠೋಪಕರಣ ಕಂಪನಿಯ ಶೋ ರೂಮೊಂದರ ಫೋಟೋ ಅದು. ಅದ್ರಲ್ಲಿ ಬೂದು ಬಣ್ಣದ ಟಾಪ್ ತೊಟ್ಟ ಹುಡುಗಿಯೊಬ್ಬಳಿದ್ದಾಳೆ.

ಆ ಹುಡುಗಿ ಶೋರೂಂ ಒಳಗೆ ಬರ್ತಾ ಇದ್ದಂತೆ ಅಲ್ಲಿದ್ದವರೆಲ್ಲ ಆಕೆಯನ್ನೊಮ್ಮೆ ಆಶ್ಚರ್ಯದಿಂದ ನೋಡಿದ್ದಾರೆ. ಸುಂದರವಾಗಿರುವ, ವಿದ್ಯಾವಂತೆಯಂತೆ ಕಾಣುವ ಈ ಹುಡುಗಿ ಟಾಪ್ ಬಿಟ್ಟರೆ ಕೆಳಗೆ ಏನನ್ನೂ ಧರಿಸಿಲ್ಲ. ಪ್ಯಾಂಟ್ ಹೋಗ್ಲಿ, ಒಳ ಉಡುಪನ್ನು ಕೂಡ ಧರಿಸಿಲ್ಲ. ಶೋ ರೂಂನಲ್ಲಿದ್ದ ಕೆಲವರು ಈಕೆಯ ವಿಡಿಯೋ ಮಾಡಿದ್ರೆ ಮತ್ತೆ ಕೆಲವರು ಫೋಟೋ ತೆಗೆದಿದ್ದಾರೆ.

ಅದ್ರಲ್ಲಿ ಒಬ್ಬರು ಸಾಮಾಜಿಕ ಜಾಲತಾಣಕ್ಕೆ ಈ ಪೋಟೋವನ್ನು ಅಪ್ ಲೋಡ್ ಮಾಡಿದ್ದಾರೆ. ನೋಡ್ತಾ ಇದ್ದಂತೆ ಫೋಟೋ ವೈರಲ್ ಆಗಿದೆ. ಕೆಲವರು ಇದು  ಐಕೆಇಎ ಕಂಪನಿಯ ಪ್ರಚಾರದ ಗಿಮಿಕ್ ಎಂದಿದ್ದಾರೆ. ಇದರಿಂದ ಕಂಗಾಲಾದ  ಐಕೆಇಎ ಕಂಪನಿ ಪೊಲೀಸರಿಗೆ ದೂರು ನೀಡಿದೆ. ಹಾಗೆ ಸಾಮಾಜಿಕ ಜಾಲತಾಣಗಳಿಂದ ಫೋಟೋ ತೆಗೆಯುವಂತೆ ಮನವಿ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...