alex Certify
ಕನ್ನಡ ದುನಿಯಾ       Mobile App
       

Kannada Duniya

ಅಕ್ಕಿ ಕದ್ದ ಇಲಿಗೆ ಈತ ಕೊಟ್ಟಿದ್ದಾನೆ ವಿಚಿತ್ರ ಶಿಕ್ಷೆ..!

rat-china-robbery-759ಅಪರಾಧ ಕೃತ್ಯಗಳನ್ನೆಸಗಿದವರು ಸಿಕ್ಕಿ ಬಿದ್ದಾಗ ಒಮ್ಮೊಮ್ಮೆ ಸಾರ್ವಜನಿಕರೇ ಕಾನೂನು ಕೈಗೆತ್ತಿಕೊಂಡು ಶಿಕ್ಷೆ ಕೊಡುವುದನ್ನು ನೋಡಿದ್ದೀರಿ. ಜಾನುವಾರುಗಳು ಹೊಲಕ್ಕೆ ನುಗ್ಗಿ ಪೈರು ತಿಂದ ವೇಳೆ ಅದರ ಮಾಲೀಕನಿಗೆ ಬುದ್ದಿ ಕಲಿಸಲು ಕಟ್ಟಿ ಹಾಕಿದ ಪ್ರಕರಣಗಳನ್ನೂ ಕೇಳಿದ್ದೀರಿ. ಆದರೆ ಅಕ್ಕಿಯನ್ನು ಕದ್ದು ತಿಂದಿದೆ ಎಂಬ ಕಾರಣಕ್ಕೆ ಚೀನಾದ ಅಂಗಡಿ ಮಾಲೀಕನೊಬ್ಬ ಇಲಿಯೊಂದಕ್ಕೆ ವಿಚಿತ್ರ ಶಿಕ್ಷೆ ನೀಡಿದ್ದಾನೆ.

ಚೀನಾದ ಗುಂಗ್ಡಾಂಗ್ ಪ್ರಾಂತ್ಯದ ಯಾಯೂನ್ ನಗರದಲ್ಲಿ ಈ ಘಟನೆ ನಡೆದಿದ್ದು, ತನ್ನ ಅಂಗಡಿಯಲ್ಲಿ ಅಕ್ಕಿಯನ್ನು ಕದ್ದು ತಿನ್ನುತ್ತಿದ್ದ ಕಳ್ಳ ಇಲಿಯನ್ನು ಕಷ್ಟಪಟ್ಟು ಹಿಡಿದ ಮಾಲೀಕ, ಅದನ್ನು ರಟ್ಟಿನ ಪೆಟ್ಟಿಗೆಗೆ ಕಟ್ಟಿ ಹಾಕಿದ್ದಾನೆ. ಅಷ್ಟೇ ಅಲ್ಲ, ತಾನು ಇನ್ನು ಮುಂದೆ ಇಂತಹ ತಪ್ಪು ಮಾಡುವುದಿಲ್ಲವೆಂಬ ಬರಹ ಹೊಂದಿದ್ದ ಫಲಕವನ್ನೂ ಅದರ ಕುತ್ತಿಗೆಗೆ ನೇತು ಹಾಕಿದ್ದಾನೆ.

ಈ ಫೋಟೋ ಮೊದಲು ಚೀನಾದ ಸಾಮಾಜಿಕ ಜಾಲತಾಣ Weibo ದಲ್ಲಿ ಹರಿದಾಡಿದ್ದು, ಬಳಿಕ ಫೇಸ್ ಬುಕ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ. ಇಲಿಗೆ ಈತ ಕೊಟ್ಟಿರುವ ಶಿಕ್ಷೆಯ ಫೋಟೋ ಕಂಡು ಕೆಲವರು ನಕ್ಕು ಸುಮ್ಮನಾದರೆ ಮತ್ತೆ ಹಲವರು ಪ್ರಾಣಿ ಹಿಂಸೆ ಮಾಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...