alex Certify
ಕನ್ನಡ ದುನಿಯಾ       Mobile App
       

Kannada Duniya

ಸಾರ್ವಜನಿಕ ಪ್ರದೇಶದಲ್ಲಿ ಸ್ತನಪಾನ ಮಾಡಿಸಿದ ಮಹಿಳೆಯರು

ಫಿಲಿಪೈನ್ಸ್ ನ ಸಾರ್ವಜನಿಕ ಪ್ರದೇಶದಲ್ಲಿ ಮಹಿಳೆಯರು ಸ್ತನಪಾನ ಮಾಡಿಸಿದ್ದಾರೆ. ಸರ್ಕಾರ ಆಯೋಜನೆ ಮಾಡಿದ್ದ ಈ ಅಭಿಯಾನದಲ್ಲಿ ಸಾವಿರಾರು ತಾಯಂದಿರು ಪಾಲ್ಗೊಂಡಿದ್ದರು. ನವಜಾತ ಶಿಶುಗಳ ಸಾವು ತಡೆದು ಜನರಿಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಮನಿಲಾ ಕ್ರೀಡಾಂಗಣಕ್ಕೆ ಬಂದಿದ್ದ 1500 ಮಹಿಳೆಯರು ಸಾರ್ವಜನಿಕರೆದುರಲ್ಲಿ ಸ್ತನ್ಯಪಾನ ಮಾಡಿಸಿದ್ರು. ಕೆಲ ಮಹಿಳೆಯರು ಸೂಪರ್ ಹೀರೋ ಟೀ-ಶರ್ಟ್ ತೊಟ್ಟು ಬಂದಿದ್ದರು. ಸ್ತನಪಾನ ಮಾಡಿಸುವುದು ಕಷ್ಟ. ಆದ್ರೆ ಮಕ್ಕಳ ಆರೋಗ್ಯಕ್ಕಾಗಿ ಇದು ಅನಿವಾರ್ಯ. ಇದನ್ನು ಪ್ರೀತಿಯಿಂದ ಮಾಡ್ತಿದ್ದೇವೆ. ಜನರಲ್ಲಿ ಜಾಗೃತಿ ಮೂಡುವ ಅಗತ್ಯವಿದೆ ಎಂದು ಅಭಿಯಾನದಲ್ಲಿ ಪಾಲ್ಗೊಂಡ ಮಹಿಳೆಯರು ಹೇಳಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಸ್ತನಪಾನ ಮಾಡಿಸುವವರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. 6 ತಿಂಗಳೊಳಗಿನ ಮಕ್ಕಳಿಗೆ ಶೇಕಡಾ 50ರಷ್ಟು ತಾಯಂದಿರೂ ಸ್ತನಪಾನ ಮಾಡಿಸ್ತಿಲ್ಲ. ತಾಯಿಯ ಹಾಲು ಮಕ್ಕಳಿಗೆ ಅಮೃತವಿದ್ದಂತೆ. 6 ತಿಂಗಳ ಕಾಲ ತಾಯಿ ಹಾಲು ಕುಡಿದ ಮಗು ಆರೋಗ್ಯವಾಗಿರುತ್ತದೆ. ತಾಯಿ ಹಾಲಿನಿಂದ ವಂಚಿತವಾದ ಮಕ್ಕಳಿಗೆ ಸೋಂಕು ಬೇಗ ತಗಲುತ್ತದೆ ಎಂದು ವೈದ್ಯರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...