alex Certify
ಕನ್ನಡ ದುನಿಯಾ       Mobile App
       

Kannada Duniya

ಮನುಷ್ಯರಂತೆ ನಡೆಯುತ್ತೆ ಈ ಗೊರಿಲ್ಲಾ, ಕಾರಣ ಗೊತ್ತಾ…?

ಗೊರಿಲ್ಲಾಗಳು ಎರಡೇ ಕಾಲಿನಲ್ಲಿ ನಡೆಯೋದು ಬಹಳ ಅಪರೂಪ. ಆದ್ರೆ ಫಿಲಿಡೆಲ್ಫಿಯಾದ ಮೃಗಾಲಯದಲ್ಲಿರೋ ಈ ಗೊರಿಲ್ಲಾ ಸ್ವಚ್ಛತೆಗೆ ಬಹಳ ಆದ್ಯತೆ ನೀಡುತ್ತದೆ. ಕೈಗಳನ್ನು ಕೆಸರು ಮಾಡಿಕೊಳ್ಳೋದು ಅದಕ್ಕೆ ಇಷ್ಟವಿಲ್ಲ.

ಹಾಗಾಗಿ ಥೇಟ್ ಮನುಷ್ಯರಂತೆ ಎರಡು ಕಾಲುಗಳಲ್ಲಿ ಬಿಂದಾಸ್ ಆಗಿ ನಡೆದಾಡುತ್ತದೆ. 18 ವರ್ಷದ ಈ ಗಂಡು ಗೊರಿಲ್ಲಾದ ಹೆಸರು ಲೂಯಿಸ್. 2004ರಲ್ಲಿ ಇದನ್ನು ಮೃಗಾಲಯಕ್ಕೆ ತರಲಾಗಿತ್ತು. ಕೆಸರಾಗಿರೋ ನೆಲದಲ್ಲಿ ಕೈಗಳನ್ನೂ ಊರದೇ ಗೊರಿಲ್ಲಾ ಸರಸರನೆ ನಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ.

ಸಾಮಾನ್ಯವಾಗಿ ಈ ಗೊರಿಲ್ಲಾದ ಕೈಗಳಲ್ಲಿ ಒಂದಿಲ್ಲೊಂದು ತಿನಿಸುಗಳಿರುತ್ತವೆ. ಅದರ ಜೊತೆಗೆ ಕೈ ಕೆಸರಾಗಬಾರದು ಅನ್ನೋ ಉದ್ದೇಶವೂ ಇರೋದ್ರಿಂದ ಇದು ನಾಲ್ಕು ಕಾಲಿನಲ್ಲಿ ನಡೆದಾಡಿದ್ದನ್ನು ನೋಡುವುದೇ ಅಪರೂಪ. ಮೃಗಾಲಯದಲ್ಲಿರೋ ಎರಡು ಬ್ಯಾಚುಲರ್ ಗೊರಿಲ್ಲಾಗಳ ಪೈಕಿ ಲೂಯಿಸ್ ಕೂಡ ಒಂದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...