alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಕಿದ ವರ್ಷಗಳ ಬಳಿಕ ಬೆಳಕಿಗೆ ಬಂತು ಸತ್ಯ

ನಾಯಿಮರಿಯೆಂದು ತಂದು ಅದನ್ನು ಸಾಕಿ ಸಲಹಿಯಾದ ಮೇಲೆ ಅದು ನಾಯಿಯಲ್ಲ ನರಿ ಎಂದು ಗೊತ್ತಾದರೆ ಹೇಗಾಗಿರಬೇಡ? ಇಲ್ಲೊಬ್ಬ ಮಹಿಳೆಗೆ ಅದೇ ಅನುಭವವಾಗಿದೆ.

ಬ್ರಿಟನ್ ನಲ್ಲಿ ವ್ಯಾಂಗ್ ಎಂಬ ಮಹಿಳೆ 140 ಬ್ರಿಟಿಷ್ ಫೌಂಡ್ ಹಣ ನೀಡಿ ಪೆಟ್ ಶಾಪ್ ನಿಂದ ನಾಯಿಮರಿಯೊಂದನ್ನು ಕೊಂಡು ತಂದಿದ್ದರು. ಅದಕ್ಕೆ ನಾಯಿಗಳಿಗೆ ನೀಡುವ ಆಹಾರವಾದ ಬಿಸ್ಕಿಟ್, ಚಿಕನ್ ಎಲ್ಲವನ್ನೂ ನೀಡುತ್ತಿದ್ದರು.

ಆದರೆ ಒಂದು ವರ್ಷದ ಬಳಿಕ ಅದು ವಿಚಿತ್ರವಾಗಿ ಬೆಳೆಯತೊಡಗಿತ್ತು. ಮುಖ ಉದ್ದವಾಗಿ, ಬೆಳೆಯತೊಡಗಿತ್ತು. ನಾಯಿಗಳ ಬಾಲಕ್ಕಿಂತ ವಿಭಿನ್ನವಾಗಿ ಬೆಳೆದಿತ್ತು. ಬೇರೆ ನಾಯಿಗಳು ಇದನ್ನು ಕಂಡರೆ ಹೆದರುತಿದ್ದವು.

ಅಲ್ಲದೇ ಇದು ಕೂಗುತ್ತಲೂ ಇರಲಿಲ್ಲ….ಕಚ್ಚುತ್ತಲೂ ಇರಲಿಲ್ಲ. ಇದರಿಂದ ಸಂದೇಹಗೊಂಡ ವ್ಯಾಂಗ್ ಅದನ್ನು ಪ್ರಾಣಿಸಂಗ್ರಹಾಲಯಕ್ಕೆ ಕರೆದುಕೊಂಡು ಹೋದಾಗ ಅದು ನಾಯಿಯಲ್ಲ ಬದಲಾಗಿ ನರಿ ಎಂದು ಅವರು ದೃಢೀಕರಿಸಿದ್ದಾರೆ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...