alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಹರಣಕಾರನಿಂದ ಬಾಲಕಿಯನ್ನು ರಕ್ಷಿಸಿದ ನಾಯಿ

dog

ಅಮೆರಿಕದಲ್ಲಿ ನಾಯಿಯೊಂದು 10 ವರ್ಷದ ಬಾಲಕಿಯನ್ನು ಅಪಹರಣಕಾರರಿಂದ ಬಚಾವ್ ಮಾಡಿದೆ. ವರ್ಜೀನಿಯಾದಲ್ಲಿ ಮಧ್ಯಾಹ್ನ 3.50ರ ವೇಳೆಗೆ ಬಾಲಕಿ ತನ್ನ ನಾಯಿಯನ್ನು ವಾಕಿಂಗ್ ಗೆ ಕರೆದೊಯ್ದಿದ್ಲು. ಅಲ್ಲಿ ಪ್ರತ್ಯಕ್ಷನಾದ ಅಪರಿಚಿತನೊಬ್ಬ ಬಾಲಕಿಯನ್ನು ಎಳೆದೊಯ್ಯಲು ಯತ್ನಿಸಿದ್ದಾನೆ.

ಕೂಡಲೇ ಅಲರ್ಟ್ ಆದ ನಾಯಿ ಅಪಹರಣಕಾರನ ಮೇಲೆ ದಾಳಿ ಮಾಡಿದೆ. ಉಗುರಿನಿಂದ ಪರಚಿ, ಅವನಿಗೆ ಕಚ್ಚಲು ಯತ್ನಿಸಿದೆ. ಇದರಿಂದ ಬೆದರಿದ ಕಿಡ್ನಾಪರ್ ಬಾಲಕಿಯನ್ನು ಬಿಟ್ಟು ಅಲ್ಲಿಂದ ಓಡಿಹೋಗಿದ್ದಾನೆ. ಕೂಡಲೇ ಶ್ವಾನದಳದೊಂದಿಗೆ ಸ್ಥಳಕ್ಕೆ ಬಂದ ಪೊಲೀಸರು ದುಷ್ಕರ್ಮಿಗಾಗಿ ಶೋಧ ನಡೆಸಿದ್ರು.

ಆದ್ರೆ ಅಷ್ಟರಲ್ಲಾಗ್ಲೇ ಆತ ಅಲ್ಲಿಂದ ಪರಾರಿಯಾಗಿದ್ದ. ಆರೋಪಿಯ ಸುಳಿವು ಸಿಕ್ಕಲ್ಲಿ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈ ಘಟನೆ ಸಾಮಾಜಿಕ ತಾಣಗಳಲ್ಲೂ ಸುದ್ದಿಯಾಗಿದೆ. ನಾಯಿಯ ಸಾಹಸವನ್ನು ಎಲ್ಲರೂ ಕೊಂಡಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...