alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರ: ಪದೇ ಪದೇ ತಿನ್ನೋ ಅಭ್ಯಾಸದಿಂದ ಆಯಸ್ಸು ಕುಂಠಿತ

ಒಪ್ಪತ್ತು ಉಂಡವ ಯೋಗಿ, ಎರಡು ಹೊತ್ತು ಉಂಡವ ಭೋಗಿ, ಮೂರು ಹೊತ್ತು ಉಂಡವ ರೋಗಿ, ನಾಲ್ಕು ಹೊತ್ತು ಉಂಡವನನ್ನು ಹೊತ್ತುಕೊಂಡು ಹೋಗಿ ಎಂಬ ಮಾತು ನಮ್ಮಲ್ಲಿ ಬಹಳ ಹಿಂದಿನಿಂದಲೇ ಚಾಲ್ತಿಯಲ್ಲಿದೆ. ಅದಕ್ಕೀಗ ವಿಜ್ಞಾನಿಗಳು ಅಂಗೀಕಾರದ ಮುದ್ರೆಯೊತ್ತಿದ್ದಾರೆ.

ಹಸಿವನ್ನು ನೀಗಿಸಲು ಸ್ನಾಕ್ಸ್ ತಿನ್ನೋ ಅಭ್ಯಾಸ ಇತ್ತೀಚಿನ ದಿನಗಳಲ್ಲಿ ಬೆಳೆದುಬಿಟ್ಟಿದೆ. ಊಟಕ್ಕಿನ್ನೂ ತುಸು ಹೊತ್ತಿದೆ ಅಂತಾದ್ರೆ ತುರ್ತು ಹಸಿವನ್ನು ತಗ್ಗಿಸಲು ಏನಾದರೂ ಜಗಿಯುತ್ತಿರುತ್ತೇವೆ. ಆದರೆ ಹೀಗೆ ಊಟದ ಮಧ್ಯೆ ತಿನ್ನುವ ಅಭ್ಯಾಸ ಆಯಸ್ಸಿಗೇ ಕಂಟಕ ತರುತ್ತದೆ ಎಂದು ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ.

ಎಷ್ಟೇ ಕಡಿಮೆ ತಿಂದ್ರೂ, ಆಗಾಗ್ಗೆ ತಿನ್ನುವ ಅಭ್ಯಾಸ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಎರಡೂ ಆಹಾರದ ಮಧ್ಯೆ ಅಂತರ ಹೆಚ್ಚು ಇಡುವುದರಿಂದ ದೀರ್ಘಾಯುಷಿಯಗಳಾಗಬಹುದು ಹಾಗೂ ಆರೋಗ್ಯಯುತ ಜೀವನ ನಡೆಸಬಹುದು ಎಂಬುದನ್ನೂ ಅವರು ಕಂಡುಕೊಂಡಿದ್ದಾರೆ.

ದಿನಕ್ಕೆ ಒಂದೇ ಬಾರಿ ಆಹಾರ ಸೇವಿಸುವವರು ದೀರ್ಘಾಯುಷಿಗಳಾಗಿರುತ್ತಾರೆ. ಆಹಾರದ ನಡುವೆ ಅಂತರ ಜಾಸ್ತಿ ಇಟ್ಟುಕೊಂಡವರಿಗೆ ಮುಪ್ಪು ಸಂಬಂಧಿ ಕಾಯಿಲೆಗಳು ನಿಧಾನಗೊಳ್ಳುತ್ತವೆ ಎಂಬುದನ್ನು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...