alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀಮಂತರು ಎನಿಸಿಕೊಳ್ಳಲು ಮಾಡ್ತಾರೆ ಇಂಥಾ ಕೆಲಸ

ಜನರಿಗೆ ಇನ್ ಸ್ಟಾಗ್ರಾಮ್ ಒಂದು ರೀತಿಯ ಹುಚ್ಚು ಹಿಡಿಸಿಬಿಟ್ಟಿದೆ. ಶ್ರೀಮಂತರಂತೆ ಕಾಣಿಸಿಕೊಳ್ಳಲು ಕೆಲವರು ಚಿತ್ರವಿಚಿತ್ರ ಕೆಲಸಗಳನ್ನು ಮಾಡ್ತಿದ್ದಾರೆ. ಖಾಸಗಿ ವಿಮಾನದ ಲೆದರ್ ಸೀಟ್ ಮೇಲೆ ಆರಾಮಾಗಿ ಕುಳಿತು ಪೋಸ್ ಕೊಟ್ರೆ ಎಲ್ಲರೂ ವ್ಹಾ ವ್ಹಾ ಅನ್ನೋದಂತೂ ಗ್ಯಾರಂಟಿ. ಇದಕ್ಕಾಗಿ ಕೆಲವರು ಪ್ರೈವೇಟ್ ವಿಮಾನಗಳನ್ನು ಬಾಡಿಗೆಗೆ ಪಡೆಯುತ್ತಾರಂತೆ.

ರಷ್ಯಾದಲ್ಲಿ ಈ ಟ್ರೆಂಡ್ ಜೋರಾಗಿದೆ. ಸುಮಾರು 316 ಡಾಲರ್ ಖರ್ಚು ಮಾಡಿ ಜನರು ಈ ರೀತಿ ಫೋಟೋ ತೆಗೆಸಿಕೊಳ್ತಿದ್ದಾರೆ. ಮಾಸ್ಕೋದ ಖಾಸಗಿ ಜೆಟ್ ಸ್ಟುಡಿಯೋ ಒಂದು ಬಿಲಿಯನೇರ್ ಗಳಂತೆ ಪೋಸ್ ಕೊಡುವವರಿಗಾಗಿ ಹೇರ್ ಸ್ಟೈಲ್, ಮೇಕಪ್, ಸ್ಟುಡಿಯೋ ಲೈಟನಿಂಗ್ ಎಲ್ಲವನ್ನೂ ಮಾಡಿಕೊಡುತ್ತದೆ.

ಕೆಲವರು ತಮ್ಮ ಮುದ್ದಿನ ನಾಯಿಯನ್ನೂ ಜೆಟ್ ನಲ್ಲಿ ಕೂರಿಸಿಕೊಂಡು ಫೋಟೋಗೆ ಪೋಸ್ ಕೊಡ್ತಾರೆ. ಇನ್ನು ಕೆಲವರು ವಿಮಾನದಲ್ಲಿ ಆರಾಮಾಗಿ ನಿದ್ದೆ ಮಾಡುತ್ತಿರುವಂತೆ ನಟಿಸ್ತಾರೆ. ಇನ್ನೊಂದಷ್ಟು ಮಂದಿ ಕೈಯಲ್ಲಿ ವೈನ್ ಗ್ಲಾಸ್ ಹಿಡಿದು, ಪುಸ್ತಕ ಓದುವಂತೆ ಪೋಸ್ ಕೊಟ್ಟು ಫೋಟೋ ಕ್ಲಿಕ್ಕಿಸಿಕೊಳ್ತಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...