alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಮಗು ಮಲಗಿಸಲು ಅಮ್ಮ ಮಾಡಿರೋ ಐಡಿಯಾ

ಮಗುವನ್ನು ಮಲಗಿಸಲು ಅಮ್ಮಂದಿರು ಸಾಕಷ್ಟು ಕಸರತ್ತು ಮಾಡ್ತಾರೆ. ನಿದ್ದೆ ಮಾಡಿ 10 ನಿಮಿಷಗಳಲ್ಲಿ ಮಗು ಮತ್ತೆ ಎದ್ದು ಅಳಲಾರಂಭಿಸುವುದು ಸಾಮಾನ್ಯ. ಎಸ್ಸೆಕ್ಸ್ ಮಹಿಳೆ ಲೌರಾ ಗೆರ್ಸನ್ ಎಂಬಾಕೆ ಮಗುವನ್ನು ಮಲಗಿಸಲು ಜೀನಿಯಸ್ ಟ್ರಿಕ್ಸ್ ಒಂದನ್ನು ಕಂಡುಕೊಂಡಿದ್ದಾಳೆ.

ಲೌರಾಳ ಮಗಳು ಅಮೆಲಿಯಾ ಹತ್ಹತ್ತು ನಿಮಿಷಕ್ಕೆಲ್ಲಾ ಎದ್ದು ಅಳುತ್ತಿದ್ದಳಂತೆ. ಕೈಗೆ ಡಮ್ಮಿ ನಿಪ್ಪಲ್ ಕೊಟ್ಟ ತಕ್ಷಣ ಮತ್ತೆ ಮಲಗುತ್ತಿದ್ಲು. ಹಾಗಾಗಿ ಮಗುವಿಗೆ 3 ತಿಂಗಳಾಗಿದ್ದಾಗಿನಿಂದ್ಲೂ ಲೌರಾ ಹೊಸ ಐಡಿಯಾ ಮಾಡಿದ್ದಾಳೆ.

ಮಗು ಮಲಗುವ ಹಾಸಿಗೆಗೆ ಒಂದ್ಹತ್ತು ಡಮ್ಮಿ ನಿಪ್ಪಲ್ ಗಳನ್ನು ಅಳವಡಿಸಿದ್ದಾಳೆ. ಎಚ್ಚರವಾದ ತಕ್ಷಣ  ಅದನ್ನ ನೋಡಿ ಮಗು ಮತ್ತೆ ಆರಾಮಾಗಿ ಮಲಗ್ತಾ ಇದೆ. ಇದರಿಂದ ಲೌರಾಳ ನಿದ್ದೆಗೂ ಭಂಗ ಬರುತ್ತಿಲ್ಲ. ಮಗು ಕೂಡ ಚೆನ್ನಾಗಿ ನಿದ್ರಿಸುತ್ತಿದೆ. ಲೌರಾಳ ಈ ಪ್ಲಾನ್ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮ್ಮಂದಿರು ತಾವು ಕೂಡ ಇದನ್ನು ಟ್ರೈ ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...