alex Certify
ಕನ್ನಡ ದುನಿಯಾ       Mobile App
       

Kannada Duniya

ಈ ನೇಲ್ ಆರ್ಟ್ ನೋಡಿದ್ರೆ ನೀವು ದಂಗಾಗ್ತೀರಾ…!

ಜನರಿಗೆ ವಿಶಿಷ್ಠ ಹವ್ಯಾಸ ಇರುತ್ತದೆ. ಕೆಲವೊಬ್ಬರು ಕೇಶ ವಿನ್ಯಾಸಕ್ಕೆ ಒತ್ತು ನೀಡಿದ್ರೆ, ಕೆಲವರು ಡ್ರೆಸ್ಸಿಂಗ್ ಗೆ, ಇನ್ನು ಹಲವರು ಉಗುರಿನ ಆಕರ್ಷಣೆಗೆ ಒತ್ತು ನೀಡುತ್ತಾರೆ. ಇತ್ತೀಚೆಗೆ ಸಾಮಾಜಿಕ ತಾಣದಲ್ಲಿ ಸಕತ್ ವೈರಲ್ ಆಗುತ್ತಿರುವ ನೇಲ್ ಆರ್ಟ್ ವಿಡಿಯೋ ಅಭಿಮಾನಿಗಳನ್ನು ಮೂಕ ವಿಸ್ಮಿತರನ್ನಾಗಿಸಿದೆ.

ಹೌದು….ಈ ವಿಡಿಯೋವನ್ನು ನೀವು ಒಮ್ಮೆ ನೋಡಿದ್ರೆ, ಕಣ್ಣು ಒರೆಸಿಕೊಂಡು ಮತ್ತೊಮ್ಮೆ ನೋಡೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಅಲ್ಲಾ ಇದು ಮನುಷ್ಯನ ಉಗುರೋ, ಅಥವಾ ಮನುಷ್ಯನ ಕೈಯೋ ಎಂಬ ಸಂದೇಹ ಬಾರದೇ ಇರದು. ಅಷ್ಟರಮಟ್ಟಿಗೆ ಈ ಉಗುರಿನ ಅಂದವನ್ನು ಹೆಚ್ಚಿಸಲಾಗಿದೆ.

ನೈಲ್ ಸನ್ನಿ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಆರಂಭದಲ್ಲಿ ಗ್ರಾಹಕನ ಒಂದು ಉಗುರನ್ನು ತೋರಿಸಲಾಗುತ್ತದೆ. ನಂತರ ಈ ದೃಶ್ಯವನ್ನು ಮತ್ತೊಮ್ಮೆ ನೋಡಬೇಕು ಎಂದು ಅನಿಸದೇ ಇರದು.

ಉಗುರಿನಲ್ಲಿ ಮನುಷ್ಯನ ಕೈ ಹೋಲುವ ಹಾಗೆ ಕಟ್ ಮಾಡಲಾಗಿದೆ. ದೃಶ್ಯದಲ್ಲಿ ಸಣ್ಣ ಕಟರ್ ಸಹಾಯದಿಂದ ಒಂದೊಂದೇ ಬೊಟ್ಟು ಕಟ್ ಮಾಡೋದನ್ನು ತೋರಿಸಲಾಗಿದ್ದು, ಈ ಕಲೆಗೆ ಅಭಿಮಾನಿಗಳು ಮನಸೋತಿದ್ದಾರೆ. ಈ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಹಾಕುತ್ತಿದ್ದಂತೆ ಸುಮಾರು 1.5 ಲಕ್ಷ ಜನ ನೋಡಿದ್ದಾರೆ. ಅಲ್ಲದೆ ಹಲವು ಕಮೆಂಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...