
ಫೇಸ್ಬುಕ್ ಮಾಲೀಕ ಮಾರ್ಕ್ ಜುಕರ್ಬರ್ಗ್ ಅಮೆರಿಕ ಸೆನೆಟ್ ಮುಂದೆ ಹಾಜರಾಗಿದ್ದರು. ಕೇಂಬ್ರಿಡ್ಜ್ ಎನಲಿಟಿಕಾ ಹಗರಣಕ್ಕೆ ಸಂಬಂಧಪಟ್ಟಂತೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಮೆರಿಕದ ಸೆನೆಟರ್ ಗಳು ಮಾರ್ಕ್ ಜುಕರ್ಬರ್ಗ್ ಗೆ ಪ್ರಶ್ನೆಗಳ ಮಳೆ ಸುರಿಸಿದ್ರು.

ನಿಜಕ್ಕೂ ಇದು ಜುಕರ್ಬರ್ಗ್ ಗೆ ಮುಜುಗರದ ಸನ್ನಿವೇಶ. ಆದ್ರೆ ಅವರು ಮಾತ್ರ ಆರಾಮಾಗಿ ಕುಳಿತಿದ್ದರು. ಫೇಸ್ಬುಕ್ ಒಡೆಯ ಇಷ್ಟು ರಿಲ್ಯಾಕ್ಸ್ ಆಗಿರೋದಕ್ಕೆ ಕಾರಣ ಅವರಿಗೆ ಕೊಟ್ಟಿದ್ದ ಕುರ್ಚಿ. 5.7 ಇಂಚು ಎತ್ತರದ ಜುಕರ್ಬರ್ಗ್ ಗೆ ಡಬಲ್ ಕುಷನ್ ಇರೋ ಕುರ್ಚಿಯನ್ನು ನೀಡಲಾಗಿತ್ತು.
ಆ ಕುಷನ್ 4-5 ಇಂಚು ದಪ್ಪಗಿತ್ತು. ಈ ಕುರ್ಚಿಯಾಗ್ಲಿ, ಕುಷನ್ ಆಗ್ಲಿ ಜುಕರ್ಬರ್ಗ್ ಅವರಿಗೆ ಸೇರಿದ್ದಲ್ಲ. ಸೆನೆಟ್ ಜುಡಿಶಿಯರಿ ಕಮಿಟಿ ಅವರಿಗೆ ಇದನ್ನು ನೀಡಿದೆ. ಫೇಸ್ಬುಕ್ ಒಡೆಯನಿಗೆ ನೀಡಿರೋ ಈ ವಿಶೇಷ ಆತಿಥ್ಯ ಕೆಲವರ ಕೆಂಗಣ್ಣಿಗೆ ತುತ್ತಾಗಿದೆ.
Mark Zuckerberg needed a booster seat today to give him some cushion after Capitol Hill ripped him a new ass hole for helping Nigerian terrorist do their dirty work 😎
— PrincessFLOTUS (@GirlPOWEREmpire) April 11, 2018