alex Certify
ಕನ್ನಡ ದುನಿಯಾ       Mobile App
       

Kannada Duniya

ಪೆಂಗ್ವಿನ್ ಗಳಿಗೂ ಶುರುವಾಗಿದೆ ಸೆಲ್ಫಿ ಕ್ರೇಝ್, ಇಲ್ಲಿದೆ ನೋಡಿ ವಿಡಿಯೋ

ಪ್ರಾಣಿ, ಪಕ್ಷಿಗಳಿಗೂ ಈಗ ಸೆಲ್ಫಿ ಕ್ರೇಝ್ ಶುರುವಾಗಿದೆ. ಅಂಟಾರ್ಟಿಕಾದಲ್ಲಿ ಹಿಮದ ಮಧ್ಯೆ ಬಿದ್ದಿದ್ದ ಕ್ಯಾಮರಾ ಒಂದರಲ್ಲಿ ಎರಡು ಪೆಂಗ್ವಿನ್ ಗಳು ತಮ್ಮ ವಿಡಿಯೋವನ್ನು ತಾವೇ ಚಿತ್ರೀಕರಿಸಿಕೊಂಡಿವೆ. 38 ಸೆಕೆಂಡ್ ಗಳ ಆ ವಿಡಿಯೋ ಈಗ ವೈರಲ್ ಆಗಿದೆ.

ಪೆಂಗ್ವಿನ್ ಗಳ ಅತಿ ದೊಡ್ಡ ಕಾಲೋನಿ ಎನಿಸಿಕೊಂಡಿರೋ ಆಸ್ಟರ್ ರೂಕೆರಿಯಲ್ಲಿ ಎಡ್ಡಿ ಗಾಲ್ಟ್ ಎಂಬುವವರು ಕ್ಯಾಮರಾ ಅಳವಡಿಸಿದ್ದರು. ಈ ಚಾನ್ಸ್ ಅನ್ನು ಪೆಂಗ್ವಿನ್ ಗಳು ಮಿಸ್ ಮಾಡಿಕೊಂಡಿಲ್ಲ. ಕುತೂಹಲದಲ್ಲಿ ಕ್ಯಾಮರಾ ನೋಡುತ್ತ ತಮ್ಮ ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿವೆ.

ಆಸ್ಟ್ರೇಲಿಯನ್ ಅಂಟಾರ್ಟಿಕ್ ಡಿವಿಶನ್ ಫೇಸ್ಬುಕ್ ಪೇಜ್ ನಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಒಂದು ಗಂಟೆಯೊಳಗೆ 30,000ಕ್ಕೂ ಹೆಚ್ಚು ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ಈ ಹಿಂದೆ ಕೂಡ ಅಂಟಾರ್ಟಿಕದಲ್ಲಿ ಪೆಂಗ್ವಿನ್ ಗಳ ಸೆಲ್ಫಿ ಸುದ್ದಿ ಮಾಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...