alex Certify
ಕನ್ನಡ ದುನಿಯಾ       Mobile App
       

Kannada Duniya

ನಂಬಲಸಾಧ್ಯವಾದರೂ ಮನ ಮುಟ್ಟುವ ಸಂಗತಿ ಇಲ್ಲಿದೆ

ಮನೆಯಲ್ಲಿ ಸಾಕು ಪ್ರಾಣಿಗಳೊಂದಿಗೆ ಕಲವರು ಉತ್ತಮ ಸಂಬಂಧ ಹೊಂದಿರುತ್ತಾರೆ. ಮಕ್ಕಳಂತೆ, ಕೆಲವೊಮ್ಮೆ ಮಕ್ಕಳಿಗಿಂತ ಹೆಚ್ಚಿನ ಅಕ್ಕರೆಯಿಂದ ಸಾಕುಪ್ರಾಣಿಗಳನ್ನು ನೋಡಿಕೊಳ್ಳುತ್ತಾರೆ. ಆದರೆ, ಜಲಚರವೊಂದು ಜೀವದಾತನನ್ನು ಕಾಣಲು ಬರೋಬ್ಬರಿ 5 ಸಾವಿರ ಕಿಲೋ ಮೀಟರ್ ದೂರದಿಂದ ಬಂದು ಹೋಗಿದೆ ಎಂದರೆ ನಂಬುತ್ತೀರಾ?

ನಂಬಲು ಕಷ್ಟವಾದರೂ, ನಿಜ ಸಂಗತಿ ಇದು. ಬ್ರೆಜಿಲ್ ದ್ವೀಪವೊಂದರಲ್ಲಿ ವಾಸವಾಗಿರುವ ಜೊಯಾ ಪೆರೈರಾ ಡಿಸೋಜ ಎಂಬುವವರಿಗೆ ಅದೊಂದು ದಿನ ಸಮುದ್ರ ತೀರದಲ್ಲಿ ಪುಟ್ಟ ಪೆಂಗ್ವಿನ್ ಒಂದು ಕಂಡಿತ್ತು. ಮೈಯೆಲ್ಲಾ ಎಣ್ಣೆ, ಅಂಟು ಅಂಟಿದ್ದರಿಂದ ಅದು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿರುವುದನ್ನು ಗಮನಿಸಿದ ಜೊಯಾ, ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಜೋಪಾನವಾಗಿ ಕಾಪಾಡಿದ್ದಾರೆ. ನೀಟಾಗಿ ಕ್ಲೀನ್ ಮಾಡಿ, ಅದನ್ನು ಸಾಕಿ ಸಲಹಿದ್ದಾರೆ. ಅದಕ್ಕೆ ಡಿಂಡಿಮ್ ಎಂದೂ ಹೆಸರಿಟ್ಟಿದ್ದಾರೆ.

ಡಿಂಡಿಮ್ ಸುಮಾರು 11 ತಿಂಗಳ ಕಾಲ ಜೊಯಾ ಆರೈಕೆಯಲ್ಲಿ ಬೆಳೆದಿದೆ. ಬಳಿಕ ನೋವಿನಿಂದಲೇ ಜೊಯಾ ಅವರಿಂದ ದೂರವಾಗಿ ಸಮುದ್ರಕ್ಕೆ ಇಳಿದಿದೆ. ಇದಾದ ಕೆಲವೇ ತಿಂಗಳಲ್ಲಿ ಕಡಲ ಕಿನಾರೆಯಲ್ಲಿ ಜೊಯಾ ಅವರನ್ನು ಕಂಡು ಅವರನ್ನೇ ಹಿಂಬಾಲಿಸಿದೆ. ಕೆಲ ಸಮಯ ಅವರೊಂದಿಗೆ ಮತ್ತೆ ಕಾಲ ಕಳೆದು ಹೋಗಿದೆ. ಚಿಲಿ, ಅರ್ಜೆಂಟೈನಾದಲ್ಲಿ ವ್ಯಾಪ್ತಿಯಲ್ಲಿ ಈ ಡಿಂಡಿಮ್ ಪೆಂಗ್ವಿನ್ ಕೆಲ ಸಮಯ ಕಳೆಯುತ್ತದೆ. ಮತ್ತೆ ಸ್ವಲ್ಪ ತಿಂಗಳು ಜೊಯಾ ಅವರನ್ನು ಕಾಣಲು ಸುಮಾರು 5 ಸಾವಿರ ಮೈಲಿಯಿಂದ ಕ್ರಮಿಸಿ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...