alex Certify
ಕನ್ನಡ ದುನಿಯಾ       Mobile App
       

Kannada Duniya

ನವಿಲಿಗೆ ಚೆಲ್ಲಾಟ- ಮನುಷ್ಯನಿಗೆ ಧರ್ಮ ಸಂಕಟ

peacock_mating1

ಮಂಗಗಳ ಕಾಟಕ್ಕೆ ಬೇಸತ್ತ ಗ್ರಾಮದ ಬಗ್ಗೆ ನಾವು ಕೇಳಿದ್ದೇವೆ. ಈಗ ನವಿಲಿನ ಕಾಟ ಶುರುವಾಗಿದೆ. ಬೆಳೆಗಳಿಗಲ್ಲ, ಮನುಷ್ಯರಿಗೆ. ಗರಿಬಿಚ್ಚಿ ಕುಣಿದ್ರೆ ನವಿಲನ್ನು ನೋಡಲು ಎರಡು ಕಣ್ಣು ಸಾಲದು. ಗರಿ ಬಿಚ್ಚಿ ನವಿಲು ಕುಣಿಯುವುದನ್ನು ನೋಡಲು ಅದೆಷ್ಟೋ ಮಂದಿ ಕಾತುರದಿಂದ ಕಾಯ್ತಾರೆ. ಆದ್ರೆ ಇಂಗ್ಲೆಂಡ್ ನ ಒಂದು ಹಳ್ಳಿ ಜನಕ್ಕೆ ನವಿಲಿನ ಸಹವಾಸವೇ ಬೇಡ ಎಂಬಂತಾಗಿದೆ.

ಯುಎಸ್ ಒ ಮೂರ್ ಗ್ರಾಮದ ಜನರಿಗೆ ನವಿಲುಗಳು ತಲೆನೋವಾಗಿ ಪರಿಣಮಿಸಿವೆ. ಬೆಳಿಗ್ಗೆ ಹಾಗೂ ರಾತ್ರಿ ಎನ್ನದೆ ಕೂಗುವ ನವಿಲಿನ ಶಬ್ದಕ್ಕೆ ಅಲ್ಲಿನ ಜನರಿಗೆ ನಿದ್ದೆ ಇಲ್ಲದಂತಾಗಿದೆ. ಕಾರುಗಳ ಮೇಲೆಯೂ ಈ ನವಿಲುಗಳು ದಾಳಿ ಮಾಡುತ್ತವೆ. ಅವುಗಳ ಕೊಕ್ಕು ಹಾಗೂ ಕಾಲಿನಿಂದ ಗ್ಲಾಸ್ ಗಳ ಮೇಲೆ ಗೀರು ಬೀಳ್ತಾ ಇದೆಯಂತೆ.

ಇಲ್ಲಿ ವಾಸಿಸುವ ಜನರು ಕಳೆದ ಆರು ವರ್ಷಗಳಿಂದ ಈ ಹಿಂಸೆ ಅನುಭವಿಸುತ್ತಿದ್ದಾರಂತೆ. ಸುಮಾರು 30 ನವಿಲುಗಳು ಇಲ್ಲಿವೆ ಎಂದು ಅಂದಾಜಿಸಲಾಗಿದೆ. ನವಿಲು ಎಲ್ಲಿಂದ ಬಂತು ಎನ್ನುವ ಬಗ್ಗೆ ಸ್ಷಷ್ಟ ಮಾಹಿತಿ ಇಲ್ಲ. ಸ್ಥಳೀಯ ಆಡಳಿತಕ್ಕೆ ಈ ಬಗ್ಗೆ ದೂರನ್ನೂ ನೀಡಿದ್ದಾರೆ. ಆದ್ರೆ ನವಿಲು ಯಾವ ಪಕ್ಷಿ, ಅದು ಯಾವ ನಿಯಮಕ್ಕೆ ಸೇರಬೇಕೆಂಬ ಬಗ್ಗೆ ಗೊಂದಲವಿದೆ. ಹಾಗಾಗಿ ಅದರ ರಕ್ಷಣೆ ಮಾಡಲು ಸಾಧ್ಯವಾಗ್ತಾ ಇಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...