alex Certify
ಕನ್ನಡ ದುನಿಯಾ       Mobile App
       

Kannada Duniya

ಹಲವರಲ್ಲಿ ಗಾಬರಿ ಹುಟ್ಟಿಸಿತ್ತು ಈ ನಾಯಿಯ ಹೆಸರು…!

ಚಿಕಿತ್ಸೆಯ ಅಗತ್ಯವಿದ್ದ ‘ಐಸಿಸ್’ ಎಂಬ ಶ್ವಾನದ ಹೆಸರು ಕೇಳಿಯೇ ಗಾಬರಿಗೊಂಡಿದ್ದ ಆನ್ಲೈನ್ ಹಣ ಪಾವತಿದಾರ ಸಂಸ್ಥೆ ಪೇ ಪಾಲ್, ಶ್ವಾನದ ಚಿಕಿತ್ಸೆಗೆ ನೀಡಲಾಗಿದ್ದ ಹಣಕ್ಕೆ ತಡೆ ನೀಡಿದ್ದ ವಿಚಿತ್ರ ಘಟನೆ ನಡೆದಿದೆ. ಶ್ವಾನದ ಹೆಸರು ಬದಲಾದ ಮೇಲೆ ತಡೆಯನ್ನು ತೆರವುಗೊಳಿಸಲಾಗಿದೆ.

ಐಸಿಸ್ ಹೆಸರಿನ ಗೋಲ್ಡನ್ ಲಾಬ್ರೆಡಾರ್ ತಳಿಯ 11ವರ್ಷದ ಶ್ವಾನದ ಆರೋಗ್ಯ ಹದಗೆಟ್ಟಿತ್ತು. ಅದರ ಮಾಲಕಿ ತಾನು ಸಂಗ್ರಹಿಸಿದ ಚಿಕಿತ್ಸಾ ನಿಧಿಯನ್ನ ಐಸಿಸ್ ಉಗ್ರ ಸಂಘಟನೆಗೆ ಕಳುಹಿಸುತ್ತಿರಬಹುದೆಂಬ ಅನುಮಾನ ಪೇ ಪಾಲ್ ಸಂಸ್ಥೆಯನ್ನು ಕಾಡಿದ್ದು, ಹೀಗಾಗಿ ಹಣ ಪಾವತಿಗೆ ತಡೆ ನೀಡಿತ್ತು.

ಆನಂತರದಲ್ಲಿ ಶ್ವಾನದ ಆರೋಗ್ಯವನ್ನು ಗಮನಿಸುತ್ತಿದ್ದ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಆ ನಾಯಿಯ ಹೆಸರನ್ನು ಅಲಿಸ್ ಎಂದು ಬದಲಿಸಿದರು. ಬಳಿಕ ಶ್ವಾನದ ಆರೋಗ್ಯ ಸರಿಪಡಿಸುವ ನಿಟ್ಟಿನಲ್ಲಿ ಆನ್ಲೈನ್ ಮೂಲಕ ಮತ್ತೆ ಜನರಿಂದ ಸಹಾಯ ಕೋರಲಾಯ್ತು. ಇದಕ್ಕೆ ಜನರಿಂದ ಕೂಡ ಸೂಕ್ತ ಸ್ಪಂದನೆ ಸಿಗ್ತಿದೆಯಂತೆ.ಆದ್ರೆ ಶ್ವಾನದ ಮೊದಲ ಹೆಸರನ್ನು ಕೇಳಿಯೇ ಭಯಪಟ್ಟಿದ್ದ ಪೇ ಪಾಲ್ ಹೆಸರು ಬದಲಿಸಿದ ಮೇಲೆ ಸಹಾಯಕ್ಕೆ ನಿಂತ ಘಟನೆ ಹಲವರ ಪಾಲಿಗೆ ವಿಚಿತ್ರ ಎನಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...