alex Certify
ಕನ್ನಡ ದುನಿಯಾ       Mobile App
       

Kannada Duniya

ಕಂಬಿ ಹಿಂದೆ ಉಳಿಯಲು ಕಟ್ಟಬೇಕಿದೆ ಹಣ

room-kk

ಥೈಲ್ಯಾಂಡ್ ನಲ್ಲಿ ಹೊಸ ರೂಪದ ಹೋಟೆಲ್ ಆರಂಭವಾಗಿದೆ. ಇಲ್ಲಿ ಕಂಬಿ ಹಿಂದೆ ಉಳಿಯಲು ಹಣ ಕಟ್ಟಬೇಕಿದೆ.

ಜೈಲು ಪ್ರೇರಿತ ಈ ಹೋಟೆಲ್ ನಲ್ಲಿ ಅತಿಥಿಗಳನ್ನು ಉತ್ತಮವಾಗಿ ಕಾಣಲಾಗುತ್ತದೆ. ಇಲ್ಲಿರುವ ಕೋಣೆಗಳು ಬಂದೋಬಸ್ತ್ ಆಗಿದ್ದು, ರಾಡ್ ಗಳಿಂದ ಮಾಡಿದ ಗೇಟ್, ಹಾಸಿಗೆಗಳಿವೆ.

ಸಾಮಾನ್ಯ ಶೌಚಾಲಯಗಳನ್ನು ಬಳಸಬೇಕಿದೆ. ಅಲ್ಲದೇ ಇಲ್ಲಿಗೆ ಬರುವ ಅತಿಥಿಗಳಿಗೆ ಕೈದಿಗಳು ಧರಿಸುವಂತಹ ಕಪ್ಪು ಬಿಳಿಯ ವಸ್ತ್ರಗಳನ್ನು ಕೊಡಲಾಗುತ್ತದೆ.

ಜನ ಹೆಚ್ಚಾಗಿ ಫೈವ್ ಸ್ಟಾರ್ ಹೋಟೆಲ್ ಗಳ ಐಷಾರಾಮಿ ಸೌಲಭ್ಯಗಳನ್ನು ಇಷ್ಟಪಡುತ್ತಾರೆ. ಅದಕ್ಕಿಂತ ಭಿನ್ನವಾದವರಿಗಾಗಿಯೇ ಇಂತಹ ಹೋಟೆಲ್ ನಿರ್ಮಿಸಲಾಗಿದೆ.

ಈಗಾಗಲೇ ಜಗತ್ತಿನಲ್ಲಿ ಅನೇಕ ಬಗೆಯ ಹೋಟೆಲ್ ಗಳು ನಿರ್ಮಾಣವಾಗಿವೆ. ಸ್ವಿಜರ್ ಲೆಂಡ್ ನಲ್ಲಿ ಬಂಕರ್ ನಲ್ಲಿ ಹೋಟೆಲ್ ನಿರ್ಮಾಣವಾಗಿದೆ.

ಹೀಗೆ ಬೇರೆ ಬೇರೆ ಮಾದರಿಯ ಹೋಟೆಲ್ ಗಳಿದ್ದು, ಜೈಲಿನ ಅನುಭವ ಹೇಗಿರುತ್ತದೆ ಎಂಬುದನ್ನು ತಿಳಿಯುವ ಆಸಕ್ತಿ ಇರುವವರಿಗೆ ಥೈಲ್ಯಾಂಡ್ ಹೋಟೆಲ್ ನಿರ್ಮಾಣವಾಗಿದೆ.

ಪ್ರತಿ ರಾತ್ರಿಗೆ 30 ಡಾಲರ್ ಪಾವತಿಸಿ ಈ ಜೈಲಿನ ಹೋಟೆಲ್ ನಲ್ಲಿ ನೀವು ಕೈದಿಯಾಗಿ(ಅತಿಥಿಯಾಗಿ) ಅನುಭವ ಪಡೆಯಬಹುದು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಸ್ಥಾಪಿಸಿದರೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...