alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯರನ್ನು ತೊರೆದಿದ್ದ 8 ಮಂದಿ ಎನ್.ಆರ್.ಐ. ಗಳಿಗೆ ಸಂಕಷ್ಟ

ಉದ್ಯೋಗಕ್ಕಾಗಿ ಇತರೆ ರಾಷ್ಟ್ರಗಳಿಗೆ ಹೋದಂತ ಎಂಟು ಮಂದಿ ಅನಿವಾಸಿ ಭಾರತೀಯ ಪುರುಷರ ಪಾಸ್ ಪೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ. ಪತ್ನಿಯರನ್ನ ಈ ಎಂಟು ಮಂದಿ ಅನಿವಾಸಿ ಭಾರತೀಯರು ತೊರೆದಿರುವ ಆರೋಪದಲ್ಲಿ ಇಂತದ್ದೊಂದು ಕ್ರಮವನ್ನ ಕೈಗೊಳ್ಳಲಾಗಿದೆ.

ಕೇಂದ್ರದ ಆಂತರಿಕ ವ್ಯವಹಾರಗಳ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ, ವಿದೇಶಿ ವ್ಯವಹಾರಗಳ ಇಲಾಖೆ ಮತ್ತು ಗೃಹ ಇಲಾಖೆಯ ಒಬ್ಬೊಬ್ಬ ಪ್ರತಿನಿಧಿಯನ್ನ ಒಳಗೊಂಡ ವಿಶೇಷ ಕಮಿಟಿಯನ್ನ ಇಂತಾ ಪ್ರಕರಣಗಳ ನಿರ್ವಹಣೆಗಾಗಿ ರಚಿಸಲಾಗಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಈ ಕಮಿಟಿಯ ಮುಂದೆ ಎನ್ಆರ್ಐ ಪುರುಷರು, ಪತ್ನಿಯರನ್ನ ಯಾವುದೇ ಕಾನೂನಿನ ಪ್ರಕ್ರಿಯೆಗೆ ಒಳಪಡದೆ ತೊರೆದಂತಾ 70 ದೂರುಗಳು ದಾಖಲಾಗಿವೆ.

ಈ ಪ್ರಕರಣದ ಸಂಬಂಧ ಈಗಾಗ್ಲೇ ಸಂಬಂಧಪಟ್ಟವರಿಗೆ ಪಾಸ್ಪೋರ್ಟ್ ರದ್ದುಪಡಿಸಲಾಗಿದೆ ಅನ್ನೋ ಮಾಹಿತಿಯನ್ನು ನೀಡಲಾಗಿದೆಯಂತೆ. ಅಲ್ಲದೇ ಪತ್ನಿಯರನ್ನು ತೊರೆದ ಪತಿ ಮಹಾಶಯರಿಗೆ ಲುಕ್ ಔಟ್ ನೊಟೀಸ್ ಕೂಡ ನೀಡಲಾಗಿದೆಯಂತೆ.

ಈ ಬಗ್ಗೆ ಇನ್ನಷ್ಟು ಕಾನೂನನ್ನು ಬಿಗಿಗೊಳಿಸೋಕೆ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ನಿರ್ಧರಿಸಿದ್ದಾರೆ. ಅನಿವಾಸಿ ಭಾರತೀಯರ ಮದುವೆಗಳು ಏಳು ದಿನಗಳ ಒಳಗೆ ರಿಜಿಸ್ಟರ್ ಮಾಡಬೇಕಾದ ಕಡ್ಡಾಯ ನಿಯಮವನ್ನು ಜಾರಿಗೆ ತರೋದಕ್ಕೆ ಕೇಂದ್ರ ನಿರ್ಧರಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...