alex Certify
ಕನ್ನಡ ದುನಿಯಾ       Mobile App
       

Kannada Duniya

ಎದೆ ನಡುಗಿಸುತ್ತೆ ಫೇಸ್ ಬುಕ್ ನಲ್ಲಿ ಹರಿದಾಡ್ತಿರೋ ಈ ವಿಡಿಯೋ

ಚೀನಾದಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಅಲ್ಲಿ ಅವಘಡಗಳು ಸಂಭವಿಸುತ್ತಲೇ ಇವೆ. ಮಳೆಯ ಆರ್ಭಟಕ್ಕೆ ಒಳಚರಂಡಿಗಳು ತುಂಬಿ ಹರಿಯುತ್ತಿದ್ದು, 11 ವರ್ಷದ ಬಾಲಕನೊಬ್ಬ ಆಯತಪ್ಪಿ ವೇಗವಾಗಿ ಹರಿಯುತ್ತಿದ್ದ ಒಳ ಚರಂಡಿಗೆ ಬಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ.

ಕಾರಿನಲ್ಲಿ ಹೋಗುತ್ತಿದ್ದ ಇಬ್ಬರು, ಬಾಲಕ ಡ್ರೈನೇಜ್ ಗೆ ಬೀಳುವುದನ್ನು ನೋಡಿದ್ದಾರೆ. ತಕ್ಷಣವೇ ಕಾರಿನಿಂದ ಇಳಿದ ವ್ಯಕ್ತಿಗಳು ಆತನನ್ನು ಉಳಿಸಲು ಕಾಲುವೆ ಪಕ್ಕದಲ್ಲೇ ಓಡಿದ್ದಾರೆ. ಕೊನೆಗೆ ಮ್ಯಾನ್ ಹೋಲ್ ನಿಂದ ಬಾಲಕನನ್ನು ಎತ್ತಿ ರಕ್ಷಿಸಿದ್ದಾರೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಚೀನಾದ ಕ್ವಾಝೋ, ಝೆಜಿಯಾಂಗ್ ನಲ್ಲಿ ಈ ಘಟನೆ ನಡೆದಿದ್ದು, ಬಾಲಕನನ್ನು ಬದುಕಿಸಿದ ವ್ಯಕ್ತಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗ್ತಿದೆ. ಹಾಗೆಯೇ ಈ ವಿಡಿಯೋ ಫೇಸ್ ಬುಕ್ ನಲ್ಲಿ ವೈರಲ್ ಆಗಿದ್ದು, ಬರಿ 10 ಗಂಟೆಯಲ್ಲಿ 2 ಲಕ್ಷ ಜನರು ವೀಕ್ಷಿಸಿದ್ದಾರೆ.

ಘಟನೆಯಲ್ಲಿ ಬಾಲಕನಿಗೆ ಯಾವುದೇ ಗಾಯಗಳಾಗಿಲ್ಲ. ಬಾಲಕನನ್ನು ಸುರಕ್ಷಿತವಾಗಿ ಕರೆತಂದ, ವ್ಯಕ್ತಿಗಳಿಗೆ ಫೇಸ್ ಬುಕ್ ನಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬರ್ತಿದೆ.

Storm drain rescue

Passersby help save 11-year-old kid from being swept away in a storm drain in Quzhou, Zhejiang province

Posted by Shanghaiist on Friday, May 18, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...