alex Certify
ಕನ್ನಡ ದುನಿಯಾ       Mobile App
       

Kannada Duniya

ಕೂದಲೆಳೆ ಅಂತರದಲ್ಲಿ ತಪ್ಪಿದೆ ಭಾರೀ ವಿಮಾನ ದುರಂತ

ಎಂಜಿನ್ ಬೇರ್ಪಟ್ಟಿದ್ದರಿಂದ ಪ್ಯಾರಿಸ್ ನಿಂದ ಲಾಸ್ ಎಂಜಲೀಸ್ ಗೆ ಹೊರಟಿದ್ದ ವಿಮಾನವನ್ನು ಕೆನಡಾದಲ್ಲಿ ತುರ್ತು ಭೂಸ್ಪರ್ಷ ಮಾಡಬೇಕಾಯ್ತು. ಅಟ್ಲಾಂಟಾದಲ್ಲಿ ಹಾರುತ್ತಿದ್ದ ಎ380 ವಿಮಾನದ ಕ್ಯಾಬಿನ್ ನಲ್ಲಿ ವೈಬ್ರೇಶನ್ ಶಬ್ಧ ಕೇಳಿಸಿತ್ತು.

ವಿಮಾನ ಅಲ್ಲಾಡಲಾರಂಭಿಸಿತ್ತು. ವಿಮಾನ ಸ್ಥಿರತೆ ಕಾಯ್ದುಕೊಂಡು ತುರ್ತು ಭೂಸ್ಪರ್ಷ ಮಾಡಲು 20 ನಿಮಿಷ ತೆಗೆದುಕೊಂಡಿದೆ. ದಿಢೀರನೆ ವಿಮಾನ ಅಲ್ಲಾಡಲು ಶುರುವಾಗಿದ್ರಿಂದ ಪ್ರಯಾಣಿಕರೆಲ್ಲ ಬೆಚ್ಚಿಬಿದ್ದಿದ್ರು. ಆದ್ರೆ ಅದೃಷ್ಟವಶಾತ್ ವಿಮಾನ ಪತನಗೊಂಡಿಲ್ಲ.

ವಿಮಾನ ಹಕ್ಕಿಗೆ ಡಿಕ್ಕಿ ಹೊಡೆದಿದ್ದನ್ನು ಮಹಿಳೆಯೊಬ್ಬಳು ನೋಡಿದ್ದಾಳೆ. ಕೆಲವೇ ಕ್ಷಣಗಳಲ್ಲಿ ವಿಮಾನದಿಂದ ಎಂಜಿನ್ ಬೇರ್ಪಟ್ಟಿದ್ದು, ಕೆನಡಾದಲ್ಲಿ ಲ್ಯಾಂಡ್ ಆಗಲಿದೆ ಅಂತಾ ಪೈಲಟ್ ಪ್ರಕಟಿಸಿದ್ದ.
ಪೈಲಟ್ ಗಳು ಅತ್ಯಂತ ಅನುಭವಿಗಳು ಮತ್ತು ನಿಪುಣರಾಗಿದ್ದರಿಂದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಈ ವಿಮಾನದಲ್ಲಿ 496 ಪ್ರಯಾಣಿಕರು ಹಾಗೂ 24 ಸಿಬ್ಬಂದಿ ಪ್ರಯಾಣಿಸುತ್ತಿದ್ರು. 2010ರ ನವೆಂಬರ್ ನಲ್ಲೂ ಇಂಥದ್ದೇ ಘಟನೆ ನಡೆದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...