alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದು ಫೋಟೋಗಾಗಿ ಮುಗಿಬಿದ್ದಿದ್ರು ನೂರಾರು ಮಂದಿ

ಲಂಡನ್ ನ ಪಾರ್ಸನ್ಸ್ ಗ್ರೀನ್ ಮೆಟ್ರೋ ನಿಲ್ದಾಣದಲ್ಲಿ ಬಾಂಬ್ ಸ್ಫೋಟ ನಡೆದಿದೆ ಅನ್ನೋ ಸುದ್ದಿ ಹೊರಬಿದ್ದು ಕೆಲವೇ ಕ್ಷಣಗಳ ಬಳಿಕ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಆಗಿದ್ದ ಫೋಟೋ ನೋಡಿ ಎಲ್ಲರೂ ಅಕ್ಷರಶಃ ಬೆಚ್ಚಿಬಿದ್ದಿದ್ರು. ಸ್ಫೋಟದ ಭೀಕರತೆಗೆ ಆ ಫೋಟೋ ಸಾಕ್ಷಿಯಾಗಿತ್ತು.

ಮಾಧ್ಯಮದವರಿಗೆ ಪೊಲೀಸರಿಂದ ಸ್ಫೋಟದ ಬಗ್ಗೆ ಖಚಿತ ಮಾಹಿತಿ ಸಿಕ್ಕಿರಲಿಲ್ಲ. ಹಾಗಾಗಿ ಎಲ್ಲರೂ ಸಾಮಾಜಿಕ ಜಾಲತಾಣಗಳ ಮೇಲೆ ಗಮನವಿಟ್ಟಿದ್ರು. ಅಷ್ಟರಲ್ಲೇ ಪೀಟರ್ ಕ್ರೌಲಿ ಎಂಬಾತ ಫೋಟೋ ಒಂದನ್ನು ಟ್ವಟ್ಟರ್ ನಲ್ಲಿ ಹಾಕಿದ್ದ. ಸ್ಫೋಟದ ರಭಸಕ್ಕೆ ಆತನ ತಲೆಯ ಮುಂಭಾಗ ಸುಟ್ಟು ಹೋಗಿತ್ತು.

ಆ ಫೋಟೋ ನೋಡಿದ ಪತ್ರಕರ್ತರೆಲ್ಲ ಪೀಟರ್ ಗೆ ಮೆಸೇಜ್ ಕಳಿಸಿದ್ರು. ದಯವಿಟ್ಟು ಆ ಫೋಟೋ ಬಳಸಲು ಅನುಮತಿ ಕೊಡು ಅಂತಾ ಮನವಿ ಮಾಡಿಕೊಂಡ್ರು. ಈ ರೀತಿ ಪೀಟರ್ ಗೆ ಟ್ವಿಟ್ಟರ್ ನಲ್ಲಿ ಮೆಸೇಜ್ ಗಳ ಸುರಿಮಳೆಯೇ ಆಗಿದೆ. ಕೊನೆಗೆ ಪೀಟರ್ ಇಮೇಜ್ ಬಳಸಿಕೊಳ್ಳಲು ಸಮ್ಮತಿಸಿದ್ದ.

ಪತ್ರಕರ್ತರ ಆತುರ ನೋಡಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಫೋಟದಲ್ಲಿ ಗಾಯಗೊಂಡ ವ್ಯಕ್ತಿಗೆ ನೆಮ್ಮದಿಯಿಂದ ಇರಲು ಬಿಡದೇ ಮೇಲಿಂದ ಮೇಲೆ ಮೆಸೇಜ್ ಕಳಿಸಿ ತೊಂದರೆ ಕೊಟ್ಟಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...