alex Certify
ಕನ್ನಡ ದುನಿಯಾ       Mobile App
       

Kannada Duniya

ಗಿಳಿ ಮಾಡಿದ ಎಡವಟ್ಟಿಗೆ ಬೇಸ್ತು ಬಿದ್ದ ಅಗ್ನಿಶಾಮಕ ದಳ

ಪುಟಾಣಿ ಗಿಳಿಯೊಂದು ಮಾಡಿದ ಎಡವಟ್ಟಿನಿಂದಾಗಿ ಅಗ್ನಿಶಾಮಕದಳದವರು ಬೇಸ್ತು ಬೀಳುವಂತಾಯಿತು. ಮನೆಯೊಳಗಿನ ಪಂಜರದಲ್ಲಿಟ್ಟ ಗಿಳಿ ಬೇರೇನೂ ಮಾಡಿಲ್ಲ, ಕೇವಲ ಸ್ಮೋಕ್ ಅಲಾರಾಂನ ಅನುಕರಣೆ ಮಾಡಿದ್ದಷ್ಟೆ. ಅಷ್ಟಕ್ಕೇ ಆ ವಸತಿ ಸಮುಚ್ಛಯದ ಸ್ಮೋಕ್ ಅಲಾರಾಂ ಸಕ್ರಿಯಗೊಂಡು ಅಗ್ನಿಶಾಮಕ ದಳದವರಿಗೆ ಮಾಹಿತಿ ಹೋಯಿತು.

ಅವರು ಓಡೋಡಿ ಬಂದು ಯಾವ ಮನೆಗೆ ಬೆಂಕಿ ಬಿದ್ದಿದೆ ಎಂದು ಬಂದು ನೋಡಿದರೆ ಕಂಡಿದ್ದು ಗಿಳಿ! ಈ ಘಟನೆ ನಡೆದಿದ್ದು ಇಂಗ್ಲೆಂಡ್‌ನ ನಾರ್ಥಮ್ಟೋನ್‌ಶೈರ್‌ನಲ್ಲಿ. ಅಗ್ನಿಶಾಮಕದವರು ವಸತಿ ಸಮುಚ್ಛಯಕ್ಕೆ ಬಂದಾಗ ಎಲ್ಲಿಯೂ ಬೆಂಕಿ ಕಾಣಿಸಲಿಲ್ಲ. ಕೊನೆಗೆ ಅದರ ಸಿಬ್ಬಂದಿ ಹುಡುಕಾಡಿದಾಗ ಜಾಝ್ ಹೆಸರಿನ ಈ ಗಿಳಿ ಮಿಮಿಕ್ರಿಯನ್ನು ಪತ್ತೆ ಹಚ್ಚಲಾಯಿತು.

ನಾವು ಬಂದಾಗ ಹಿನ್ನೆಲೆಯಲ್ಲಿ ಅಲಾರಾಂ ಕೇಳಿಸುತ್ತಿತ್ತು. ಆಗ ಇದು ಆಫ್ರಿಕನ್ ಬೂದು ಗಿಳಿಯದ್ದೇ ಕೆಲಸ ಎಂದು ಅರಿವಾಯಿತು. ಅದ್ಭುತವಾಗಿ ಸ್ಮೋಕ್ ಅಲಾರಾಂನ ಮಿಮಿಕ್ರಿ ಮಾಡುತ್ತಿತ್ತು ಎಂದು ವಾಚ್ ಕಮಾಂಡರ್ ನಾರ್ಮನ್ ಜೇಮ್ಸ್ ಹೇಳುತ್ತಾರೆ.
ಈ ಜಾತಿಯ ಗಿಳಿಗಳು ಮಾನವನ ಧ್ವನಿಯನ್ನೂ ಚೆನ್ನಾಗಿ ಅನುಕರಣೆ ಮಾಡಬಲ್ಲವಾಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...