alex Certify
ಕನ್ನಡ ದುನಿಯಾ       Mobile App
       

Kannada Duniya

ಗಿಳಿ ಮಾತಿನಿಂದ ಹೊರಬಿತ್ತು ಕೊಲೆ ಪ್ರಕರಣ

_90129320_duramcouple_1466703439188_3347645_ver1-0

ಅಮೆರಿಕಾದ ಮಿಚಿಗನ್ ನಲ್ಲಿ ಪತ್ನಿ, ಪತಿಯನ್ನು ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾಳೆ. ಪತಿಯನ್ನು ಈಕೆ ಕೊಲೆ ಮಾಡಿದ್ದಾಳೆಂಬುದಕ್ಕೆ ಸಾಕು ಗಿಳಿಯನ್ನು ಸಾಕ್ಷಿಯಾಗಿ ಪರಿಗಣಿಸಲಾಗಿದೆ.

ಎರಡು ವರ್ಷಗಳ ಹಿಂದೆ 2015ರಲ್ಲಿ ಕೊಲೆ ನಡೆದಿತ್ತು. ಗ್ಲೆನಾ ದುರಾಮ್ ಹೆಸರಿನ ಮಹಿಳೆ ಪತಿ ಮಾರ್ಟಿನ್ ನನ್ನು ಐದು ಬಾರಿ ಗುಂಡಿಕ್ಕಿ ಕೊಲೆ ಮಾಡಿದ್ದಳು. ಇದಾದ ನಂತ್ರ ಆಕೆಯೂ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ಎಲ್ಲ ಘಟನೆಯನ್ನು ಸಾಕು ಗಿಳಿ ನೋಡಿತ್ತು. ಪದೇ ಪದೇ ಮಾರ್ಟಿನ್ ಧ್ವನಿಯಲ್ಲಿ ಗುಂಡು ಹಾರಿಸಬೇಡ ಎಂದಿತ್ತು ಗಿಳಿ.

ಸದ್ಯ ಮಾರ್ಟಿನ್ ಮಾಜಿ ಪತ್ನಿ ಗಿಳಿಯನ್ನು ಸಾಕುತ್ತಿದ್ದಾಳೆ. ಆಕೆ ಪ್ರಕಾರ ಆ ರಾತ್ರಿ ಮಾರ್ಟಿನ್ ಹಾಗೂ ಗ್ಲೆನಾ ನಡುವೆ ನಡೆದ ಸಂಭಾಷಣೆಯನ್ನು ಗಿಳಿ ಪುನರಾವರ್ತಿಸುತ್ತಿತ್ತಂತೆ. ಮಾರ್ಟಿನ್ ಪಾಲಕರ ಪ್ರಕಾರ ಗಿಳಿ ಗುಂಡು ಹಾರಿಸಬೇಡ ಎಂದು ಹೇಳುತ್ತಿತ್ತಂತೆ. ಇದು ದಂಪತಿ ನಡುವೆ ನಡೆದ ಕೊನೆಯ ಮಾತುಕತೆಯಾಗಿರುವ ಸಾಧ್ಯತೆ ಇದೆ. ಇದನ್ನೇ ಗಿಳಿ ಪುನರುಚ್ಛರಿಸುತ್ತಿದೆ.

ನ್ಯಾಯ ಸಿಗಲು ಎರಡು ವರ್ಷ ಕಾಯಬೇಕಾಯ್ತು. ಇದು ನೋವುಂಟುಮಾಡಿದೆ ಎಂದು ಮಾರ್ಟಿನ್ ತಾಯಿ ಹೇಳಿದ್ದಾರೆ. ಮಾರ್ಟಿನ್ ಪರ ವಕೀಲರು ನ್ಯಾಯಾಲಯಕ್ಕೆ ಗಿಳಿಯನ್ನು ಹಾಜರುಪಡಿಸಲು ಅನುಮತಿ ಕೋರಿದ್ದರು. ಕೋರ್ಟ್ ಇದಕ್ಕೆ ಒಪ್ಪಿಗೆ ನೀಡಿಲ್ಲ. ಆದ್ರೆ ಗ್ಲೆನಾ ಅಪರಾಧಿಯೆಂದು ತೀರ್ಪು ನೀಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...