alex Certify
ಕನ್ನಡ ದುನಿಯಾ       Mobile App
       

Kannada Duniya

ಭಯೋತ್ಪಾದನಾ ದಾಳಿಗೆ ಪೊಲೀಸ್ ಅಧಿಕಾರಿ ಬಲಿ

paris_attack_1492736925_749x421

ಫ್ರಾನ್ಸ್ ನ ರಾಜಧಾನಿ ಪ್ಯಾರಿಸ್ ನಲ್ಲಿ ಗುರುವಾರ ರಾತ್ರಿ ಬಂದೂಕುದಾರಿಯೊಬ್ಬ ಪೊಲೀಸ್ ಮೇಲೆ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಹತರಾಗಿದ್ದಾರೆ. ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಭಯೋತ್ಪಾದನಾ ಸಂಘಟನೆ ಐಎಸ್ಐಎಸ್ ದಾಳಿಯ ಹೊಣೆ ಹೊತ್ತುಕೊಂಡಿದೆ.

ಪೊಲೀಸರ ಮೇಲೆ ಗುಂಡು ಹಾರಿಸಿದ ಭಯೋತ್ಪಾದಕ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದ್ರೆ ಪೊಲೀಸ್ ಪ್ರತಿ ದಾಳಿಗೆ ಸಾವನ್ನಪ್ಪಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಪ್ಯಾರಿಸ್ ನ ಚಾಂಪ್ಸ್-ಎಲಿಸೀಸ್ ಶಾಪಿಂಗ್ ಮಾಲ್ ನಲ್ಲಿ ಈ ಘಟನೆ ನಡೆದಿದೆ. ರಾತ್ರಿ 9 ಗಂಟೆಗೆ ಈ ಘಟನೆ ನಡೆದಿದೆ. ಪೊಲೀಸ್ ಕಾರ್ ಮೇಲೆ ಭಯೋತ್ಪಾದಕ ದಾಳಿ ನಡೆಸಿದ್ದಾನೆ. ಭಯೋತ್ಪಾದಕನ ಬಳಿ ಅಟೋಮೆಟಿಕ್ ಗನ್ ಇತ್ತು ಎನ್ನಲಾಗಿದೆ.

ಪ್ಯಾರಿಸ್ ನಲ್ಲಿ ರಾಷ್ಟ್ರಪತಿ ಚುನಾವಣೆಗೆ ತಯಾರಿ ನಡೆಯುತ್ತಿದೆ. ಭಾನುವಾರ ಮೊದಲ ಹಂತದ ಮತದಾನ ನಡೆಯಲಿದೆ. ಇದನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದ್ದು, ಐಎಸ್ಐಎಸ್ ಹೊಣೆ ಹೊತ್ತುಕೊಂಡಿದೆ. ಸುಮಾರು 39 ವರ್ಷದ ಪ್ಯಾರಿಸ್ ನಿವಾಸಿಯೇ ಈ ದಾಳಿ ನಡೆಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...