alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಅಕೌಂಟ್ ಸೀಜ್ ಆದ್ಮೇಲೆ ಗೊತ್ತಾಯ್ತು ಮಗು ಬದುಕಿರುವ ವಿಷ್ಯ..!?

ರಷ್ಯಾದ ವೊಲ್ಗೊಗ್ರಾಡ್ ನಗರದಲ್ಲಿ ಆಶ್ಚರ್ಯಕರ ಘಟನೆ ನಡೆದಿದೆ. ಮಗು ಜನಿಸಿ 7 ವರ್ಷಗಳ ನಂತ್ರ ತಮ್ಮ ಮಗು ಜೀವಂತವಾಗಿದೆ ಎಂಬ ಸತ್ಯ ದಂಪತಿಗೆ ಗೊತ್ತಾಗಿದೆ. ಮಹಿಳೆಯ ಬ್ಯಾಂಕ್ ಖಾತೆ ಸೀಜ್ ಮಾಡಿದಾಗ ಈ ವಿಷ್ಯ ಬಹಿರಂಗವಾಗಿದೆ.

ಅನಾಥಾಶ್ರಮವೊಂದರ ಹೇಳಿಕೆ ಮೇರೆಗೆ ಮಹಿಳೆ ಅಕೌಂಟ್ ಸೀಜ್ ಮಾಡಲಾಗಿದೆ ಎಂದು ಬ್ಯಾಂಕ್ ಹೇಳಿತ್ತು. ಮಹಿಳೆ ಮಗುವನ್ನು ನಾವು ನೋಡಿಕೊಳ್ತಿದ್ದೇವೆ. ಆದ್ರೆ ಮಹಿಳೆ ಹಣ ನೀಡ್ತಿಲ್ಲವೆಂದು ಅನಾಥಾಲಯ ದೂರಿತ್ತಂತೆ. ಇದನ್ನು ಕೇಳಿ ಮಹಿಳೆ ಕಂಗಾಲಾಗಿದ್ದಾಳೆ.

ಮಗು ಬದುಕಿರುವ ವಿಷ್ಯ ಕೇಳಿ ಖುಷಿಗೊಂಡ ದಂಪತಿ ಅನಾಥಾಲಯಕ್ಕೆ ಹೋಗಿ ಮಗು ಕೇಳಿದ್ದಾರೆ. ಅನಾಥಾಲಯ 2 ಲಕ್ಷ 40 ಸಾವಿರ ರೂಪಾಯಿ ಕೇಳಿದೆ. ಜೊತೆಗೆ ಕೋರ್ಟ್ ಮೂಲಕ ಮಗು ಪಡೆಯುವಂತೆ ಹೇಳಿದೆ. ಕೋರ್ಟ್ ದಂಪತಿ ಪರ ತೀರ್ಪಿತ್ತಿದೆ.

ಮಗು ಹುಟ್ಟಿದಾಗ ಆಸ್ಪತ್ರೆ ವೈದ್ಯರು ಮಗು ಇನ್ನು 1 ತಿಂಗಳು ಬದುಕಿದ್ರೆ ಹೆಚ್ಚು ಎಂದಿದ್ದರಂತೆ. ದಂಪತಿ ನೋವಿನಿಂದ ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಬಂದಿದ್ದರಂತೆ. ತಿಂಗಳ ನಂತ್ರ ಆಸ್ಪತ್ರೆಗೆ ಹೋದಾಗ ಮಗು ಸತ್ತಿದೆ ಎಂದು ಆಸ್ಪತ್ರೆ ಸಿಬ್ಬಂದಿ ದಂಪತಿಗೆ ಹೇಳಿದ್ದರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...