alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಹೆಬ್ಬಾವಿನ ಜೊತೆ ಪುಟ್ಟ ಪೋರನ ತುಂಟಾಟ

ಹಾವು ಎಂದಾಕ್ಷಣ ಮೈ ಜುಂ ಎನ್ನುತ್ತದೆ. ಒಂದು ವೇಳೆ ನಮ್ಮ ಕಣ್ಣಿಗೆ ಹಾವು ಬಿದ್ರೆ, ಜೀವ ಉಳಿಸಿಕೊಳ್ಳಲು ಶತಪ್ರಯತ್ನ ಮಾಡುತ್ತೇವೆ. ಆದ್ರೆ, ಇಲ್ಲೊಬ್ಬ ಪುಟ್ಟ ಪೋರ, ಹೆಬ್ಬಾವಿನ ಜೊತೆ ಆಟ ಆಡುತ್ತಿರುವ ದೃಶ್ಯವನ್ನು ಪೋಷಕರೇ ಸೆರೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗ್ತಾ ಇದೆ.

ಪುಟ್ಟ ಬಾಲಕ ತನಗಿಂತ ಗಾತ್ರದಲ್ಲಿ ಹತ್ತು ಪಟ್ಟು ದೊಡ್ಡದಿರುವ ಹೆಬ್ಬಾವಿನ ಜೊತೆ ಆಟ ಆಡುತ್ತಿದ್ದಾನೆ. ಈ ದೃಶ್ಯ ಇಂಡೋನೇಷ್ಯಾದ ಜಾಲಾ ಪ್ರದೇಶದಲ್ಲಿ ಸೆರೆಯಾಗಿದೆ. ಬಾಲಕನನ್ನು ಹೆಬ್ಬಾವು ಸುತ್ತುವರೆದ ವಿಡಿಯೋ ನೋಡಿದ್ರೆ, ಪೋರನಿಗೆ ಹೆಬ್ಬಾವು ಏನು ಮಾಡುತ್ತದಪ್ಪಾ ಎಂಬ ಹೆದರಿಕೆ ನೋಡುಗರಿಗೆ ಆಗುತ್ತದೆ. ಆದ್ರೆ, ಹೆಬ್ಬಾವು ಕೂಡಾ ಪುಟ್ಟ ಬಾಲಕನೊಂದಿಗೆ ತುಂಟಾಟ ಆಡುತ್ತಿರುವುದು ಎಲ್ಲರ ಗಮನ ಸೆಳೆದಿದೆ.

ಹೆಬ್ಬಾವು ಅವನಿಂದ ತಪ್ಪಿಸಿಕೊಂಡು ಮುಂದೆ ಹೋಗುತ್ತದೆ. ಇದನ್ನು ಕಂಡು ಬಾಲಕ, ತನ್ನ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಾ ಹೆಬ್ಬಾವಿನತ್ತ ಹೋಗುತ್ತಾನೆ. ನಂತರ ಹೆಬ್ಬಾವಿನ ತಲೆಯನ್ನು ಹಿಡಿದು ಮತ್ತೆ ತಾನು ಕುಳಿತುಕೊಂಡಲ್ಲಿ ಹಿಡಿದು ತರುತ್ತಾನೆ.

ಈ ದೃಶ‍್ಯವನ್ನು ಬಾಲಕನ ಪೋಷಕರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಪುಟ್ಟ ಪೋರನ ತುಂಟಾಟ ಕಂಡು ತಂದೆ, ತಾಯಿ ನಗುತ್ತಿರುವುದು ದೃಶ‍್ಯದಲ್ಲಿ ಕೇಳುತ್ತದೆ. ಸಾಮಾಜಿಕ ತಾಣದಲ್ಲಿ ಈ ವಿಡಿಯೋ ಅಪ್ ಲೋಡ್ ಆಗ್ತಾ ಇದ್ದಂತೆ ನೆಟ್ಟಿಗರು, ಪೋಷಕರ ವಿರುದ್ಧ ಕೆಂಡ ಕಾರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...