alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರಿಗೆ ಕರೆ ಮಾಡಿದ ಬಾಲಕಿ ಹೇಳಿದ್ದೇನು ಗೊತ್ತಾ…?

ಜಂಕ್ ಫುಡ್, ಫಾಸ್ಟ್ ಫುಡ್​ ಗೆ ಮಕ್ಕಳು ಬಾಯಿ ಚಪ್ಪರಿಸಿದ ಹಾಗೆ ಪೌಷ್ಠಿಕ ಆಹಾರ ಅಂದ್ರೆ ಬೇಡ ಅಂತ ಹಠ ಮಾಡೋದೇ ಜಾಸ್ತಿ. ಕೆನಡಾದಲ್ಲಿ 12 ವರ್ಷದ ಹುಡುಗಿಯೊಬ್ಬಳು ತನಗೆ ಇಷ್ಟವಿಲ್ಲದಿರೋ ಆಹಾರವನ್ನು ಅಪ್ಪ, ಅಮ್ಮ ಕೊಟ್ಟರು ಅನ್ನೋ ಕಾರಣಕ್ಕೆ ಪೊಲೀಸರನ್ನೇ ಮನೆಗೆ ಕರೆಸಿದ್ದಾಳೆ. ಅಷ್ಟೇ ಅಲ್ಲ ಅಪ್ಪ, ಅಮ್ಮನ ವಿರುದ್ಧವೇ ಕಂಪ್ಲೇಟ್ ಕೊಡಲು ಮುಂದಾಗಿದ್ದಾಳೆ.

ಗುರುವಾರ ರಾತ್ರಿ ಕೆನಡಾದ ನೋವಾ ಸ್ಕೋಟಿಯಾ ಪೊಲೀಸ್ ಕಂಟ್ರೋಲ್ ರೂಮ್ ಫೋನ್ ನಂಬರ್ 911 ಗೆ ಕರೆ ಮಾಡಿದ ಹುಡುಗಿ, ಕೂಡಲೇ ಎಮರ್ಜೆನ್ಸಿ ಅನ್ನೋ ಸಂದೇಶ ನೀಡಿದ್ಲು. ಆ ಮೆಸೇಜ್ ಎಲ್ಲಿಂದ ಬಂತು ಅಂತ ಚೆಕ್ ಮಾಡಿದ ಪೊಲೀಸರು ಅದಾಗ್ಲೇ ಅಲ್ಲಿಗೆ ಹೊರಡೋ ಸಿದ್ಧತೆಯಲ್ಲಿದ್ದರು.

ಆಗ ಮತ್ತೊಮ್ಮೆ ಪೊಲೀಸರಿಗೆ ಫೋನ್ ಮಾಡಿದ ಆ ಹುಡುಗಿ, ಎಷ್ಟೊತ್ತಿಗೆ ಬರುತ್ತೀರಿ ಅಂತ ಅಸಮಾಧಾನದಿಂದ ಕೇಳಿದಳು. ಫೋನ್ ಮಾಡಿದ ಹುಡುಗಿ ಏನೋ ಅಪಾಯದಲ್ಲಿರಬೇಕು ಅಂತ ಬಂದು ನೋಡಿದ ಪೊಲೀಸರಿಗೆ ಶಾಕ್ ಆಗಿತ್ತು. ತುಂಬಾ ಸಿಲ್ಲಿ ಅನ್ನಿಸೋ ವಿಚಾರಕ್ಕೆ ಆ ಬಾಲಕಿ ಪೊಲೀಸರನ್ನೇ ಕರೆಸಿಬಿಟ್ಟಿದ್ದಳು.

ರಾತ್ರಿ ಊಟಕ್ಕೆ ಪೋಷಕರು ನನಗೆ ವೆಜಿಟೇಬಲ್ ಸಲಾಡ್ ಕೊಟ್ಟಿದ್ದಾರೆ. ಅದನ್ನ ತಿನ್ನೋಕೆ ನನಗೆ ಇಷ್ಟವಿಲ್ಲ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಿ ಅಂತ ದೂರು ನೀಡೋಕೆ ಮುಂದಾದ್ಲು. ಏನೋ ಸೀರಿಯಸ್ ಇರಬೇಕು ಅಂತ ಓಡಿ ಬಂದ ಪೊಲೀಸರಿಗೆ ಹುಡುಗಿ ಹೇಳಿದ್ದನ್ನ ಕೇಳಿ ಶಾಕ್ ಆಗಿದೆ. ಬಳಿಕ ಅವರ ಅಪ್ಪ-ಅಮ್ಮನಿಗೆ ಕ್ಲಾಸ್ ತಗೊಂಡ ಪೊಲೀಸರು, ಮಕ್ಕಳಿಗೆ ಪೊಲೀಸ್ ಸಹಾಯವಾಣಿಯ ಮಹತ್ವವನ್ನು ತಿಳಿಸಿ ಹೇಳುವಂತೆ ಸೂಚನೆ ನೀಡಿ ವಾಪಸ್ಸು ತೆರಳಿದ್ದಾರೆ.

ಕೆಲ ದಿನಗಳ ಹಿಂದೆ ಇಂತದ್ದೇ ಘಟನೆ ನಡೆದಿತ್ತು. ರೆಸ್ಟೋರೆಂಟ್ ಒಂದರಿಂದ ಮಹಿಳೆಯೊಬ್ಬರು ಪೊಲೀಸ್ ಸಹಾಯವಾಣಿ ಸಂಖ್ಯೆ 911 ಗೆ ಕರೆ ಮಾಡಿದ್ರು. ಅವರ ಸಮಸ್ಯೆ ಏನು ಅಂತ ಕೇಳೋಕೆ ಹೋದ್ರೆ ಪಿಜ್ಜಾ ಆರ್ಡರ್ ಮಾಡಿದ ರೆಸ್ಟೋರೆಂಟ್​ ನವರು ತನ್ನ ಆರ್ಡರ್ ನೀಡೋಕೆ ತಡ ಮಾಡಿದ್ರು ಅನ್ನೋ ಕಾರಣ ಹೇಳಿದ್ರು. ಆಕೆ ಪೊಲೀಸರನ್ನೇ ಪಿಜ್ಜಾ ಡಿಲಿವೆರಿ ಬಾಯ್ಸ್ ಅಂದುಕೊಂಡುಬಿಟ್ಟಿದ್ದಳೋ ಏನೋ…!

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...