alex Certify
ಕನ್ನಡ ದುನಿಯಾ       Mobile App
       

Kannada Duniya

ಊದಿಕೊಂಡಿದ್ದ ಮಹಿಳೆ ಮುಖದಲ್ಲಿತ್ತು ಭಯಂಕರ ಹುಳ…!

ಮಾಸ್ಕೋದಲ್ಲಿ ಮಹಿಳೆ ತುಟಿ ಹಾಗೂ ಮುಖದಲ್ಲಿ ಊತ ಕಾಣಿಸಿಕೊಂಡಿತ್ತು. ಮೊದಲು ನಿರ್ಲಕ್ಷ್ಯ ಮಾಡಿದ್ದ ಮಹಿಳೆ ವೈದ್ಯರ ಭೇಟಿ ನಂತ್ರ ದಂಗಾಗಿದ್ದಾಳೆ. ಆಕೆ ಮುಖದಲ್ಲಿ ಪರಾವಲಂಬಿ ಹುಳು (parasitic-worm) ಇರುವುದು ಕಂಡು ಬಂದಿದೆ. ತುಟಿಯಿಂದ ಹಿಡಿದು ಮುಖದ ಎಲ್ಲ ಭಾಗಕ್ಕೂ ಹುಳುಗಳು ಹರಡಿದ್ದವು.

ಆರಂಭದಲ್ಲಿ ಕಣ್ಣಿನ ಮೇಲ್ಭಾಗ ಊದಲು ಶುರುವಾಗಿದೆ. ನಂತ್ರ ತುಟಿಯವರೆಗೆ ಬಂದಿದೆ. ಊತದ ಜೊತೆ ಉರಿ ಹೆಚ್ಚಾಗಿದೆ. ಆರಂಭದಲ್ಲಿ ಸೋಂಕು ಎಂದುಕೊಂಡಿದ್ದ ಮಹಿಳೆ ನಂತ್ರ ವೈದ್ಯರನ್ನು ಭೇಟಿ ಮಾಡಿದ್ದಾಳೆ. ಪರೀಕ್ಷೆ ನಡೆಸಿದ ನಂತ್ರ ವೈದ್ಯರು ಪರಾವಲಂಬಿ ಹುಳ ಇರುವ ಬಗ್ಗೆ ಹೇಳಿದ್ದಾರೆ.

ಮಹಿಳೆ ಕೆಲ ದಿನಗಳ ಹಿಂದೆ ರಜೆಗೆಂದು ಹೊರಗೆ ಹೋಗಿದ್ದಳಂತೆ. ಈ ವೇಳೆ ಸೊಳ್ಳೆ ಆಕೆ ಮುಖವನ್ನು ಕಚ್ಚಿತ್ತಂತೆ. ಸೊಳ್ಳೆ ಹಾಗೂ ನಾಯಿ ಮೂಲಕ ಈ ಹುಳು ಮನುಷ್ಯರ ದೇಹ ಸೇರುತ್ತದೆಯಂತೆ. ಮನುಷ್ಯರ ದೇಹದಲ್ಲಿ 2 ವರುಷ ಈ ಹುಳ ಬದುಕಬಲ್ಲದಂತೆ. ಅದೃಷ್ಟವಶಾತ್ ಮೊದಲೇ ಈ ಸಂಗತಿ ಮಹಿಳೆಗೆ ಗೊತ್ತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...