alex Certify
ಕನ್ನಡ ದುನಿಯಾ       Mobile App
       

Kannada Duniya

ನ್ಯೂಯಾರ್ಕ್ ನಿವಾಸಿಗಳಲ್ಲಿ ದಿಗಿಲು ಹುಟ್ಟಿಸಿದ್ದು ಹುಲಿಯಲ್ಲ…!

ನ್ಯೂಯಾರ್ಕ್ ನಿವಾಸಿಗಳಲ್ಲೆಲ್ಲ ಆತಂಕ. ನಗರದಲ್ಲಿ ಹುಲಿಯೊಂದು ಸುತ್ತಾಡುತ್ತಿದೆ ಅನ್ನೋ ಸುದ್ದಿ ಕೇಳಿ ಜನರು ಭಯಭೀತರಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಈ ಸುದ್ದಿ ವೈರಲ್ ಆಗಿತ್ತು. ಅಷ್ಟಕ್ಕೂ ನ್ಯೂಯಾರ್ಕ್ ನಲ್ಲಿ ಅಲೆದಾಡುತ್ತಿದ್ದ ಪ್ರಾಣಿ ಹುಲಿಯಾಗಿರಲಿಲ್ಲ.

ರಕೂನ್ ಎಂಬ ನಿಶಾಚರಿ ಪ್ರಾಣಿಯಾಗಿತ್ತು. ಅದನ್ನು ಹುಲಿಯೆಂದು ತಪ್ಪಾಗಿ ತಿಳಿದ ವ್ಯಕ್ತಿಯೊಬ್ಬ ಜಾಲತಾಣದಲ್ಲಿ ಶೇರ್ ಮಾಡಿದ್ದ. ಆತನ ಕಣ್ಣಿಗೆ ಬಿದ್ದಿದ್ದ ಪ್ರಾಣಿಯ ಚಹರೆಯನ್ನು ಕೇಳಿದ ಮಾಧ್ಯಮಗಳು, ಅದು ಹುಲಿಯಲ್ಲ ರಕೂನ್ ಎಂದು ಸ್ಪಷ್ಟಪಡಿಸಿವೆ.

ವಾಷಿಂಗ್ಟನ್ ಹೈಟ್ಸ್ ಬಳಿ ಪ್ರಾಣಿ ಕಾಣಿಸಿಕೊಂಡಿದೆಯಂತೆ. ಇದನ್ನು ನೋಡಿದ ಸುದ್ದಿ ವಾಹಿನಿಯ ಸಿಬ್ಬಂದಿ ಹುಲಿ ಬಂದಿದೆ ಅಂತಾ ಹೇಳಿಬಿಟ್ಟಿದ್ದ. ಹುಲಿ ಹಿಡಿಯಲು ಸಿದ್ಧತೆ ಕೂಡ ನಡೆದಿತ್ತು. ಆದ್ರೆ ಸಿಬ್ಬಂದಿ ಕಣ್ಣಿಗೆ ಬಿದ್ದಿದ್ದು ಹುಲಿಯಲ್ಲ, ರಕೂನ್ ಅನ್ನೋದು ಸ್ಪಷ್ಟವಾಗುತ್ತಿದ್ದಂತೆ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...