alex Certify
ಕನ್ನಡ ದುನಿಯಾ       Mobile App
       

Kannada Duniya

ಕುಟುಂಬದವರ ಎದುರಲ್ಲೇ ಹೇಯಕೃತ್ಯ

pak-rape

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಕುಟುಂಬದವರ ಕಣ್ಣೆದುರಲ್ಲೇ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ.

ರಾಜ್ ಪುರ್ ಪಂಚಾಯಿತಿ ನೀಡಿದ ತೀರ್ಪಿನಿಂದ ಇಂತಹ ಹೇಯಕೃತ್ಯ ನಡೆದಿದೆ. ಸಂತ್ರಸ್ಥ ಬಾಲಕಿಯ ಸಹೋದರ ಅದೇ ಗ್ರಾಮದ ಯುವತಿ ಮೇಲೆ ಅತ್ಯಾಚಾರ ಎಸಗಿದ್ದ.

ಪಂಚಾಯಿತಿ ಸೇರಿದ ಸದಸ್ಯರು, ಅತ್ಯಾಚಾರ ಎಸಗಿದ ಆರೋಪಿಯ ಸಹೋದರಿ ಮೇಲೆ, ಅತ್ಯಾಚಾರ ಎಸಗಲು ತೀರ್ಪು ನೀಡಿದ್ದಾರೆ.

ಯುವತಿಯ ಕುಟುಂಬದವನೊಬ್ಬ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಘಟನೆ ಬೆಳಕಿಗೆ ಬರುತ್ತಲೇ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಅತ್ಯಾಚಾರಕ್ಕೆ ಒಳಗಾದ ಬಾಲಕಿ ಮತ್ತು ಯುವತಿಯಿಂದ ಹೇಳಿಕೆ ಪಡೆಯಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ವಶಕ್ಕೆ ಪಡೆಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...