alex Certify
ಕನ್ನಡ ದುನಿಯಾ       Mobile App
       

Kannada Duniya

ಉಗ್ರನೊಂದಿಗೆ ವೇದಿಕೆ ಹಂಚಿಕೊಂಡ ರಾಯಭಾರಿಗೆ ಗೇಟ್ ಪಾಸ್

ನವದೆಹಲಿ: ಪಾಕಿಸ್ತಾನದಲ್ಲಿ ರಾಯಭಾರಿಯಾಗಿದ್ದ ವಾಲಿದ್ ಅಬು ಅಲಿಯನ್ನು ಪ್ಯಾಲೇಸ್ತೀನ್ ವಾಪಸ್ ಕರೆಸಿಕೊಂಡಿದೆ.

ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಸಯೀದ್ ನೊಂದಿಗೆ ರಾವಲ್ಪಿಂಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದ ಕಾರಣಕ್ಕೆ ರಾಯಭಾರಿಯನ್ನು ವಾಪಸ್ ಕರೆಸಿಕೊಂಡಿದೆ.

ವಾಲಿದ್ ಅಬು ಅಲಿ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪ್ಯಾಲೇಸ್ತೀನ್, ಅವರನ್ನು ವಾಪಸ್ ಕರೆಸಿಕೊಂಡಿದೆ. ಹಫೀಜ್ ಸಯೀದ್ ನೊಂದಿಗೆ ರಾಯಭಾರಿ ವೇದಿಕೆ ಹಂಚಿಕೊಂಡಿದ್ದು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.

ಲಷ್ಕರ್ ಎ ತೋಯ್ಬಾ ಮತ್ತು ಜಮಾತ್ ಉದ್ ದವಾ ಭಯೋತ್ಪಾದಕ ಸಂಘಟನೆಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತನ್ನ ದೇಶದ ರಾಯಭಾರಿ ಉಪಸ್ಥಿತರಿದ್ದುದಕ್ಕೆ ಆಕ್ಷೇಪಿಸಿದ್ದ ಪ್ಯಾಲೇಸ್ತೀನ್ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು.

ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನಾವು ಸಹಕಾರ ನೀಡುತ್ತೇವೆ. ಭಯೋತ್ಪಾದಕ ಕೃತ್ಯಗಳನ್ನು ನಡೆಸುವವರನ್ನು ದೂರ ಇಡುತ್ತೇವೆ. ಅದೇ ಕಾರಣಕ್ಕೆ ರಾಯಭಾರಿಯನ್ನು ವಾಪಸ್ ಕರೆಸಿಕೊಳ್ಳಲಾಗಿದೆ ಎಂದು ಪ್ಯಾಲೇಸ್ತೀನ್ ಪ್ರತಿನಿಧಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...