alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಚುನಾವಣೆಯಲ್ಲಿ ಜಯಶಾಲಿಯಾದ ಚಾಯ್ ವಾಲಾನ ಆಸ್ತಿ ಎಷ್ಟು ಗೊತ್ತಾ…?

ಪಾಕಿಸ್ತಾನದಲ್ಲಿ ಚುನಾವಣೆಗಳು ಮುಗಿದಿದ್ದು, ಎಲ್ಲರೂ ಇಮ್ರಾನ್ ಖಾನ್ ಪದಗ್ರಹಣವನ್ನು ಕಣ್ಣು ತುಂಬಿಕೊಳ್ಳಲು ಕಾತುರರಾಗಿದ್ದಾರೆ. ಚುನಾವಣೆಯ ವೇಳೆ ಚಾಯ್ ವಾಲ್ ಎಂದು ಹೇಳಿಕೊಂಡು ಪ್ರಚಾರ ಪಡೆದಿದ್ದ ತೆಹರಿಕ್-ಇ-ಇನ್ಸಾಫ್ ಅಭ್ಯರ್ಥಿ ಗುಲ್ ಜಾಫರ್ ಖಾನ್, ಮಿಲಿಯನೇರ್ ಎಂಬ ಸುದ್ದಿ ಬೆಳಕಿಗೆ ಬಂದಿದೆ.

ಗುಲ್ ಜಾಫರ್ ಖಾನ್ ಎನ್.ಎ. 41 ರಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ದಾಖಲಿಸಿದ್ದಾರೆ. ಗುಲ್ ಜಾಫರ್ ಸುಮಾರು 30 ಮಿಲಿಯನ್ ಆಸ್ತಿ ಹೊಂದಿದ್ದಾಗಿ ಪಾಕ್ ಮಾಧ್ಯಮ ವರದಿ ಮಾಡಿದೆ. ಅಲ್ಲದೆ ಗುಲ್ ಜಾಫರ್ ಉಡುಪಿನ ವ್ಯಾಪಾರ ಮಾಡುತ್ತಿರೋದಾಗಿ ತಿಳಿದು ಬಂದಿದೆ. ಗುಲ್ ಜಾಫರ್ ಸ್ಥಿರ ಆಸ್ತಿಯ ಮೌಲ್ಯ 69 ಕೋಟಿ ಇರೋದಾಗಿ ಅಂದಾಜಿಸಲಾಗಿದೆ. ಎರಡು ಮನೆ, ಕೃಷಿ ಭೂಮಿ, ಸೇರಿದಂತೆ 12 ಮಿಲಿಯನ್ ಆಸ್ತಿ ಒಡೆಯ ಎಂದು ತಿಳಿದು ಬಂದಿದೆ. ಇಮ್ರಾನ್ ಖಾನ್ ಪಕ್ಷ ಗುಲ್ ಜಾಫರ್ ಗೆ ಟಿಕೆಟ್ ನೀಡುವ ಮುನ್ನ, ಆತ ಹೊಟೇಲ್ ನಲ್ಲಿ ಟೀ ಮಾರುತ್ತಿದ್ದುದ್ದಾಗಿ ವರದಿಯಾಗಿತ್ತು.

ಆಗಸ್ಟ್ 18ರಂದು ಇಮ್ರಾನ್ ಖಾನ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 342 ಸ್ಥಾನಗಳ ಪಾಕ್ ಸಂಸತ್‌ನಲ್ಲಿ ಪಿಟಿಐ, ಸರಕಾರ ರಚನೆಗೆ ಅಗತ್ಯವಾದ ಸ್ಥಾನ ಗಳಿಸದಿದ್ದರೂ ಇತರೆಯವರ ಸಹಕಾರದಿಂದ ಗದ್ದುಗೆ ಏರಲು ಮುಂದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...