alex Certify
ಕನ್ನಡ ದುನಿಯಾ       Mobile App
       

Kannada Duniya

ಆಟೋ ಚಾಲಕನ ಖಾತೆಯಲ್ಲಿ ಬರೋಬ್ಬರಿ 22.5 ಮಿಲಿಯನ್ ಡಾಲರ್

ಇತ್ತೀಚಿನ ದಿನದಲ್ಲಿ ಪಾಕಿಸ್ತಾನದಲ್ಲಿ ಶುರುವಾಗಿರುವ ಮನಿ ಲಾಂಡರಿಂಗ್ ಪ್ರಕರಣಕ್ಕೆ ಇದೀಗ ಹೊಸ ಸೇರ್ಪಡೆಯಾಗಿದ್ದು, 300 ರೂ. ಉಳಿಸಲು ವರ್ಷವಿಡೀ ದುಡಿದ ಆಟೋ ಚಾಲಕನ ಖಾತೆಯಲ್ಲಿ 22.5 ಮಿಲಿಯನ್ ಡಾಲರ್ ಹಣವಿತ್ತು ಎಂಬುದು ಬಹಿರಂಗಗೊಂಡಿದೆ.

ಪಾಕಿಸ್ತಾನದ ಕರಾಚಿಯ ಸ್ಲಂನಲ್ಲಿ ವಾಸಿಸುತ್ತಿರುವ 43 ವರ್ಷದ ಮೊಹಮ್ಮದ್ ರಶೀದ್, ಸದ್ಯ ಈ ಆರೋಪದಲ್ಲಿ ಸಿಲುಕಿದ್ದಾರೆ. ಅವರ ಹೆಸರಿನ ಖಾತೆಯಲ್ಲಿ ಇಷ್ಟು ದೊಡ್ಡ ಮೊತ್ತವಿದೆ ಎಂದು ತಿಳಿದ ಕೂಡಲೇ ಗಾಬರಿಯಾಗಿ ತಲೆಮರೆಸಿಕೊಂಡಿದ್ದಾರಂತೆ. ಆದರೆ ಈ ಖಾತೆಯಲ್ಲಿ ಹಣ ವರ್ಗವಾಗಿರುವುದು ಹೋಗಲಿ, ಖಾತೆಯಿರುವುದೇ ತಿಳಿದಿರಲಿಲ್ಲವೆಂದು ಹೇಳಿಕೆ ನೀಡಿದ್ದಾರೆ.

ಸ್ಥಳೀಯ ಬ್ಯಾಂಕಿನಲ್ಲಿ ಅವರ ಹೆಸರಿನ ಖಾತೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಹಣ ಕೆಲ ದಿನದ ಮಟ್ಟಿಗಿದ್ದು, ಬಳಿಕ ವರ್ಗಾವಣೆಯಾಗುತ್ತಿದ್ದಂತೆ ತನಿಖಾ ತಂಡದವರು ಈ ಬಗ್ಗೆ ಕರೆ ಮಾಡಿ ವಿಚಾರಣೆ ನಡೆಸಿದ್ದಾರೆ. ಆದರೆ ತನಿಖೆ ಸಂಸ್ಥೆ ತಮ್ಮನ್ನು ಬಂಧಿಸಬಹುದು ಎಂದು ಬೆದರಿ ಕೆಲ ದಿನದ ಮಟ್ಟಿಗೆ ತಲೆಮರೆಸಿಕೊಂಡಿದ್ದಾರೆ. ಬಳಿಕ ಸಂಬಂಧಿಕರು ಭರವಸೆ ನೀಡಿದ ಬಳಿಕವೇ, ಈ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಲು ಮುಂದೆ ಬಂದಿದ್ದಾರೆ.

ತನಿಖೆ ಸಂಸ್ಥೆಗೆ ನೀಡಿರುವ ಹೇಳಿಕೆಯಲ್ಲಿ, ಈ ಹಣ ಹೇಗೆ ಬಂತು ಎನ್ನುವುದು ಗೊತ್ತಿಲ್ಲ. ಮಗಳಿಗೆ 300 ರೂಪಾಯಿ ಸೈಕಲ್ ಕೊಡಿಸಲು ಒಂದು ವರ್ಷ ಹಣ ಕೂಡಿಟ್ಟಿದ್ದೇನೆ. ಆದರೆ ಈ ಘಟನೆ ಬಳಿಕ ಯಾವ ಸಮಯದಲ್ಲಿ ಯಾರು ಬಂಧಿಸುತ್ತಾರೋ ಎನ್ನುವ ಆತಂಕ ಎದುರಾಗಿ ಒಂದು ವಾರ ಆಟೊ ಓಡಿಸಿಲ್ಲ. ಇದೇ ವಿಚಾರವಾಗಿ ನನ್ನ ಪತ್ನಿ ಅನಾರೋಗ್ಯಕ್ಕೀಡಾಗಿದ್ದಾಳೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಪ್ರಧಾನಿಯಾಗಿ ಇಮ್ರಾನ್ ಖಾನ್ ಅಧಿಕಾರ ಸ್ವೀಕರಿಸುತ್ತಿದ್ದಂತೆ, ಅಕ್ರಮವಾಗಿ ಪಾಕಿಸ್ತಾನದಿಂದ ಹೊರಹೋಗುತ್ತಿದ್ದ ಹಣ ತಡೆಯಲು ಕ್ರಮ ಕೈಗೊಂಡ ಬಳಿಕ ಈ ರೀತಿಯಲ್ಲಿ ಈಗಾಗಲೇ ನೂರಾರು ಪ್ರಕರಣಗಳು ಬೆಳಕಿಗೆ ಬಂದಿದೆ. ಬಹುತೇಕರಿಗೆ ತಮ್ಮ ಹೆಸರಲ್ಲಿ ಖಾತೆಯಿರುವುದಾಗಲಿ, ಹಣ ಜಮೆಯಾಗಿರುವುದಾಗಲಿ ತಿಳಿದೇ ಇರುವುದಿಲ್ಲವಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...