alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ನಿಲ್ದಾಣಗಳಲ್ಲಿ ವಿಐಪಿ ಟ್ರೀಟ್ಮೆಂಟ್ ಗೆ ಬ್ರೇಕ್

ಇಸ್ಲಮಾಬಾದ್: ಪಾಕಿಸ್ತಾನದ ಹೊಸ ಸರ್ಕಾರ ವಿಐಪಿ ಸಂಸ್ಕೃತಿ ಕೈಬಿಡುವ ನಿಟ್ಟಿನಲ್ಲಿ ಕಠಿಣ ಹಾದಿಯ ಮೊದಲ ಹೆಜ್ಜೆ ಇಟ್ಟಿದೆ.

ಪಾಕ್ ವಿಮಾನ ನಿಲ್ದಾಣಗಳಲ್ಲಿ ರಾಜಕಾರಣಿಗಳು, ನ್ಯಾಯಾಧೀಶರು ಮತ್ತು ಮಿಲಿಟರಿ ಅಧಿಕಾರಿ, ಪತ್ರಕರ್ತರನ್ನು ಒಳಗೊಂಡ ಅತಿ ಗಣ್ಯ ವ್ಯಕ್ತಿಗಳಿಗೆ ವಿಐಪಿ ಕೋಟಾದಡಿ ಸಿಗುತ್ತಿದ್ದ ಕೆಲವು ರಿಯಾಯಿಗಳು ಇನ್ನುಮುಂದೆ ಇರುವುದಿಲ್ಲ.

ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಮತ್ತು ವಿಐಪಿಗಳ ನಡುವೆ ಯಾವುದೇ ತಾರತಮ್ಯ ಇಲ್ಲದಂತೆ ಸಮಾನ ಅವಕಾಶ ಒದಗಿಸುವ ತೀರ್ಮಾನವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ವಾರ್ತಾ ಸಚಿವ ಫವಾದ್ ಚೌಧರಿ ತಿಳಿಸಿದ್ದಾರೆ.

ಇಷ್ಟೇ ಅಲ್ಲದೇ ಪ್ರಧಾನಿ ಆದಿಯಾಗಿ, ಸಚಿವರು, ಅಧಿಕಾರಿಗಳ ಪ್ರಥಮ ದರ್ಜೆ ವಾಯುಯಾನ ಸೌಲಭ್ಯಕ್ಕೂ ಹೊಸ ಸರ್ಕಾರ ಕತ್ತರಿ ಹಾಕಿದೆ. ಒಳಾಡಳಿತ ಸಚಿವಾಲಯವು ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿಗೆ ಈ ಬಗ್ಗೆ ಸಂದೇಶ ಕಳಿಸಿ, ಯಾವುದೆ ಸರ್ಕಾರಿ ಅಧಿಕಾರಿ ಅಥವಾ ಇತರೆ ಗಣ್ಯ ವ್ಯಕ್ತಿಗಳಿಗೆ ಶಿಷ್ಟಾಚಾರ ಪಾಲಿಸುವ ಅವಶ್ಯಕತೆ ಇಲ್ಲ ಎಂದು ಸೂಚನೆ ನೀಡಿದೆ.

ಇಂಥ ನಿರ್ಧಾರವನ್ನು ಹಿಂದಿನ ಸರ್ಕಾರ ಕೈಗೊಂಡಿದ್ದರೂ ಅದು ಕಡತಗಳಲ್ಲೇ ಉಳಿದಿತ್ತು, ಕಾರ್ಯರೂಪಕ್ಕೆ ಬಂದಿರಲಿಲ್ಲ. ವಿಐಪಿಗಳಿಗೆ ವಿಮಾನ ನಿಲ್ದಾಣಗಳಲ್ಲಿ ಸರತಿ ಸಾಲಲ್ಲಿ ನಿಲ್ಲದೇ, ಲಗೇಜುಗಳನ್ನೂ ಸಹ ಸುಲಭವಾಗಿ ಸಾಗಿಸುವುದನ್ನು ಗಮನಿಸಿದ್ದೇವೆ. ಹಾಗೆಯೇ ಎಫ್ಐಎ ಅಧಿಕಾರಿಗಳು ಲಗೇಜ್ ಸಾಗಿಸಲು ನೆರವು ಪಡೆದುಕೊಂಡಿದ್ದೂ ಇದೆ ಎಂದು ಸಚಿವರು ಹೇಳಿದ್ದಾರೆ.

ಇನ್ನು ಮುಂದೆ ವಿಐಪಿಗಳಿಗೆ ಎಫ್ಐಎ ಅಧಿಕಾರಿಗಳು ಶಿಷ್ಟಾಚಾರ ಪಾಲಿಸಿದರೆ ಅಂಥವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ವಿಮಾನ ನಿಲ್ದಾಣದ ವಲಸೆ ಕೌಂಟರ್ ಗಳನ್ನು ಆಗಿಂದಾಗೆ ಪರಿಶೀಲಿಸಲು ನಿರ್ಧರಿಸಲಾಗಿದ್ದು, ಒಂದು ವೇಳೆ ವಿಐಪಿ ಟ್ರೀಟ್ ಮೆಂಟ್ ನೀಡಿದ್ದು ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿಯನ್ನು ಅಮಾನತುಗೊಳಿಸುವುದಾಗಿಯೂ ಎಚ್ಚರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...