alex Certify
ಕನ್ನಡ ದುನಿಯಾ       Mobile App
       

Kannada Duniya

ಅಶ್ಲೀಲ ಮೆಸೇಜ್ ಕಳುಹಿಸಿದವನಿಗೆ ಹೀಗೆ ಬುದ್ದಿ ಕಲಿಸಿದ್ಲು ಮಹಿಳೆ

ಮಹಿಳೆ ಲೈಂಗಿಕವಾಗಿ ಕಿರುಕುಳಕ್ಕೊಳಗಾಗುವುದು ಬರೀ ನಮ್ಮ ದೇಶದಲ್ಲಷ್ಟೇ ಅಲ್ಲ, ಬದಲಾಗಿ ಇಡೀ ಪ್ರಪಂಚದಲ್ಲಿ ಇದು ನಡೆದು ಬಂದಿದೆ. ಆದರೆ ಇಂದು ಮಹಿಳೆಯರು ಎಚ್ಚೆತ್ತುಕೊಳ್ಳುತ್ತಿದ್ದಾರೆ. ಅಂಥ ಮಾನಗೇಡಿಗಳಿಗೆ ತಕ್ಕ ಪಾಠ ಕಲಿಸುತ್ತಿದ್ದಾರೆ.

ಪಾಕಿಸ್ತಾನದಲ್ಲಿ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದ ಭಂಡನಿಗೆ ಸರಿಯಾಗೇ ಪಾಠ ಕಲಿಸಿದ್ದಾಳೆ ಈ ಮಹಿಳೆ. ಆತ ಕಳುಹಿಸಿದ ಮೆಸೇಜ್ ಗಳನ್ನು ಮೊಬೈಲ್ ನಲ್ಲಿ ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾಳೆ.

ಯಾವಾಗ ಈ ಮೆಸೇಜ್ ಗಳು ವೈರಲ್ ಆದವೋ ಎಚ್ಚೆತ್ತುಕೊಂಡು ಆ ಮಾನಗೇಡಿ, ಆಕೆಗೆ ಕ್ಷಮೆ ಕೇಳಿ ಮೆಸೇಜ್ ಮಾಡಿದ್ದ. ನನಗೆ ಕುಟುಂಬವಿದೆ. ತಾನು ಕಳುಹಿಸಿದ ಮೆಸೇಜ್ ಗಳನ್ನೆಲ್ಲ ಡಿಲೀಟ್ ಮಾಡು. ಬೇಕಿದ್ದರೆ ಕೇಳಿದಷ್ಟು ಹಣವನ್ನು ನೀಡಲೂ ಸಿದ್ಧ ಎಂದೂ ಹೇಳಿದ್ದಾನೆ. ಅಲ್ಲದೇ ತಾನು ಸ್ಕಿಜೋಫ್ರೀನಿಯಾ ಎಂಬ ಮಾನಸಿಕ ರೋಗದಿಂದ ಬಳಲುತ್ತಿರುವುದಾಗಿ ಹೇಳಿದ್ದಾನೆ.

ಇದೆಲ್ಲವನ್ನೂ ಆಕೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆ ವ್ಯಕ್ತಿಯ ವರ್ತನೆಗೆ ತೀವ್ರ ಟೀಕೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...