alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ನಲ್ಲಿ ಭಾರತದ ಹಾಡು ಹಾಡಿದ್ದೇ ತಪ್ಪಾಯ್ತು

ಪಾಕಿಸ್ತಾನದ ಏರ್ಪೋರ್ಟ್ ಸೆಕ್ಯುರಿಟಿ ಫೋರ್ಸ್, ಭಾರತೀಯ ಹಾಡನ್ನು ಹಾಡಿದ ಸಿಬ್ಬಂದಿಗೆ ಶಿಕ್ಷೆ ನೀಡಿದೆ. ಮಹಿಳೆ ಹಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದ್ರ ನಂತ್ರ ಅಧಿಕಾರಿಗಳು ತನಿಖೆಗೆ ಆದೇಶ ನೀಡಿದ್ದರು. ಎಎಸ್ಎಫ್ ನೀತಿ ಸಂಹಿತೆ ಉಲ್ಲಂಘನೆ ಹೆಸರಿನಲ್ಲಿ ಮಹಿಳಾ ಸಿಬ್ಬಂದಿಗೆ ಶಿಕ್ಷೆ ನೀಡಿದೆ.

25 ವರ್ಷದ ಮಹಿಳಾ ಸಿಬ್ಬಂದಿಗೆ 2 ವರ್ಷಗಳ ಕಾಲ ವೇತನ ಹಾಗೂ ಭತ್ಯೆ ಏರಿಸದಂತೆ ಆದೇಶ ನೀಡಿದೆ. ಮುಂದೆಯೂ ಮಹಿಳೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆ ಹೆಸರಿನಲ್ಲಿ ಶಿಕ್ಷೆ ನೀಡುತ್ತಿರುವುದು ಇದೇ ಮೊದಲಲ್ಲ.

2016ರಲ್ಲಿ ಈಗಿನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಹೊಗಳಿದ್ದು ಹಾಗೂ ಮನೆಯಲ್ಲಿ ಭಾರತದ ಬಾವುಟ ಇಟ್ಟುಕೊಂಡಿದ್ದ ವ್ಯಕ್ತಿಗೆ ಪಾಕಿಸ್ತಾನದ ಸರ್ಕಾರ ಶಿಕ್ಷೆ ನೀಡಿತ್ತು. ವ್ಯಕ್ತಿಗೆ 10 ವರ್ಷಗಳ ಜೈಲು ಶಿಕ್ಷೆಯಾಗಿದೆ. ಇದೊಂದೇ ಅಲ್ಲ 2017ರಲ್ಲಿ ಭಾರತವನ್ನು ಹೊಗಳಿದ್ದ ನ್ಯೂಸ್ ಚಾನೆಲ್ ಒಂದರ ವಿರುದ್ಧವೂ ದೂರು ದಾಖಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...